ನವದೆಹಲಿ: ಗೋಧಿ ಮತ್ತು ಬಾರ್ಲಿ ಸೇರಿದಂತೆ 2023-24ರ ಮಾರುಕಟ್ಟೆ ಋತುವಿನ ಎಲ್ಲಾ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಇಂದು ಪ್ರಕಟಿಸಿದ್ದಾರೆ.
ಗೋಧಿ ಮತ್ತು ಬಾರ್ಲಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 110 ರೂ ಹೆಚ್ಚಿಸಲಾಗಿದೆ. ಮಸೂರ್ ದಾಲ್‌ನ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 500 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಸಾಸಿವೆ ಬೆಲೆ ಕ್ವಿಂಟಲ್‌ಗೆ 209 ರೂ. ಕುಸುಬೆ ಕ್ವಿಂಟಲ್‌ಗೆ 209 ರೂ ಮತ್ತು ರವೆಗೆ 105 ರೂ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ ಅಥವಾ MSP ಎಂದರೆ ಬೆಲೆಯ ತೀವ್ರ ಕುಸಿತವನ್ನು ತಡೆಯಲು ಸರ್ಕಾರವು ರೈತರಿಂದ ಕೆಲವು ಬೆಳೆಗಳನ್ನು ಖರೀದಿಸಲು ನಿಗದಿಪಡಿಸುವ ದರವಾಗಿದೆ.
#Cabinet approves Minimum Support Prices for all Rabi Crops for Marketing Season 2023-24; absolute highest increase in MSP approved for lentil (Masur) at Rs.500/- per quintal#CabinetDecisions pic.twitter.com/FHihRcEV6b
— Office of Mr. Anurag Thakur (@Anurag_Office) October 18, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.