ಭೋಪಾಲ್: ಹಿಂದಿಯನ್ನು ಶ್ರೀಮಂತಗೊಳಿಸುವ ಮತ್ತು ಪ್ರಚಾರಪಡಿಸುವ ಅಗತ್ಯವಿದೆ ಎಂದ ಸಾರಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ದಿನಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಇಂಗ್ಲೀಷ್ ಮತ್ತು ಚೈನೀಸ್ ಭಾಷೆಯ ಜೊತೆಗೆ ಹಿಂದಿಯೂ ಕೂಡ ಪ್ರಭಾವಶಾಲಿಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಗುರುವಾರ ‘ವಿಶ್ವ ಹಿಂದಿ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಹಿಂದಿಯನ್ನು ಮರೆತರೆ ಅದು ಈ ದೇಶಕ್ಕಾಗುವ ನಷ್ಟ ಎಂದ ಅವರು, ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹಿಂದಿ ಮಾತ್ರವಲ್ಲದೇ ಇತರ ಭಾಷೆಗಳ ಪ್ರಚಾರಕ್ಕೂ ನಾವು ಬದ್ಧ ಎಂದರು.
ಗುಜರಾತಿನಲ್ಲಿ ತಾನು ಚಹಾ ಮಾರುತ್ತಿದುದ್ದನ್ನು ನೆನಪಿಸಿಕೊಂಡ ಅವರು, ಆ ವೃತ್ತಿ ನನಗೆ ಹಿಂದಿ ಕಲಿಯಲು ಅನುಕೂಲ ಮಾಡಿಕೊಟ್ಟಿತು ಎಂದರು. ಅಲ್ಲದೇ ಹಿಂದಿಯನ್ನು ಬೆಳೆಸಲು ಅಪಾರ ಕೊಡುಗೆ ನೀಡುತ್ತಿರುವ ಹಿಂದಿ ಚಿತ್ರರಂಗವನ್ನೂ ಅವರು ಶ್ಲಾಘಿಸಿದರು.
ಅಮೆರಿಕ ಅಧ್ಯಕ್ಷ, ರಷ್ಯಾ ಅಧ್ಯಕ್ಷರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ವಾಕ್ಯವನ್ನು ಹಿಂದಿಯಲ್ಲೇ ಉಚ್ಚರಿಸುತ್ತಾರೆ. ಇಸ್ರೇಲ್ ಪ್ರಧಾನಿಯವರೂ ತಮ್ಮ ಅಭಿನಂದನೆಗಳನ್ನು ನನಗೆ ಹಿಂದಿಯಲ್ಲೇ ಹೇಳಿದ್ದರು ಎಂದು ಮೋದಿ ನೆನಪಿಸಿಕೊಂಡರು.
‘ಮುಂಬರುವ ದಿನಗಳಲ್ಲಿ ಹಲವಾರು ಭಾಷೆಗಳು ಇತಿಹಾಸದ ಪುಟ ಸೇರಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಭಾಷೆಯೇ ಇಲ್ಲದಂತಾದರೆ ನಮ್ಮ ಬರವಣಿಗೆ ಉಳಿಯಲು ಹೇಗೆ ಸಾಧ್ಯ?’ ಎಂದರು.
ಇತರ ಭಾಷೆಗಳನ್ನು ಅಳವಡಿಸುವ ಮೂಲಕ ಹಿಂದಿಯನ್ನು ಶ್ರೀಮಂತಗೊಳಿಸಬೇಕು, ಇತರ ಭಾಷೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.