ಚಂಡೀಗಢ: ಕುಡಿದ ಮತ್ತಿನಲ್ಲಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಾರಣದಿಂದಾಗಿ ನಾಲ್ಕು ಗಂಟೆಗಳ ಕಾಲ ವಿಮಾನ ವಿಳಂಬವಾಯಿತು ಎಂದು ವರದಿಗಳು ಹೇಳುತ್ತಿವೆ. ಆದರೆ ಆಮ್ ಆದ್ಮಿ ಪಕ್ಷ ಈ ಬಗೆಗಿನ ವರದಿಗಳನ್ನು ತಳ್ಳಿ ಹಾಕಿದ್ದು, ಇದೊಂದು ಷಡ್ಯಂತ್ರ ಎಂದಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅಸ್ವಸ್ಥರಾಗಿದ್ದ ಕಾರಣ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಮರಳಲು ಅವರ ವಿಮಾನ ವಿಳಂಬವಾಯಿತು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಆದರೆ ಮಾನ್ ತಮ್ಮ ಬಗೆಗಿನ ವರದಿಗಳಿಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಮುಖ್ಯಮಂತ್ರಿಯನ್ನು ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
“ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನಡೆಯಲೂ ಶಕ್ತರಾಗದ ರೀತಿಯಲ್ಲಿ ಕುಡಿದ ಅಮಲಿನಲ್ಲಿದ್ದರು. ಹೀಗಾಗಿ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ” ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಕಾರಣದಿಂದಾಗಿಯೇ 4 ಗಂಟೆಗಳ ಕಾಲ ವಿಮಾನ ವಿಳಂಬಕ್ಕೆ ಕಾರಣವಾಗಿದೆ. ಅಲ್ಲದೇ ಮಾನ್ ಅವರು ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡಿದ್ದಾರೆ.
“ಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಗೀಡು ಮಾಡಿದೆ” ಎಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ.
“ಮಾನ್ ಅವರು ಅತಿಯಾದ ಮದ್ಯವನ್ನು ಸೇವಿಸಿದ್ದರಿಂದ ಅವರು ತೂರಾಡುತ್ತಿದ್ದರು ಮತ್ತು ಅವರಿಗೆ ನಿಲ್ಲಲು ಪತ್ನಿ ಮತ್ತು ಅವರ ಜೊತೆಯಲ್ಲಿನ ಭದ್ರತಾ ಸಿಬ್ಬಂದಿಗಳು ಬೆಂಬಲ ನೀಡಬೇಕಾಯಿತು” ಎಂದು ಪ್ರಯಾಣಿಕರು ಹೇಳಿದ್ದಾರೆ.
A Big Shame!!
Punjab Chief Minister Bhagwant Mann deplaned because he was heavily Drunk pic.twitter.com/7PaPSiVDtb— Delhi Congress (@INCDelhi) September 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.