ಸಮರ್ಕಂಡ್: ಪ್ರಧಾನಿ ನರೇಂದ್ರ ಮೋದಿ ಇಂದು ಉಜ್ಬೇಕಿಸ್ಥಾನದ ಸಮರ್ಕಂಡ್ನಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಇಲ್ಲಿ ಪ್ರಮುಖ ಪ್ರಾದೇಶಿಕ ಭದ್ರತಾ ಸವಾಲುಗಳು ಮತ್ತು ವ್ಯಾಪಾರ, ಹೂಡಿಕೆ ಮತ್ತು ಇಂಧನ ಪೂರೈಕೆಯಂತಹ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಇರಾನ್ನ ಇಬ್ರಾಹಿಂ ರೈಸಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇದರಲ್ಲಿ ಗಣ್ಯರಾಗಿ ಭಾಗವಹಿಸಿದ್ದಾರೆ. ಕೇಂದ್ರದ ಇತರ ನಾಯಕರು ಭಾಗಿಯಾಗಿದ್ದಾರೆ.
ಎಂಟು ಸದಸ್ಯರ ಎಸ್ಸಿಒ ಗುಂಪಿನ ಶೃಂಗಸಭೆಯಲ್ಲಿ ಭಾಗವಹಿಸಲು ಮೋದಿ ಗುರುವಾರ ರಾತ್ರಿ ಸಮರ್ಕಂಡ್ಗೆ ಆಗಮಿಸಿದರು.
ಸಮರ್ಕಂಡ್ನಲ್ಲಿನ SCO ಶೃಂಗಸಭೆಯು ಎರಡು ಸೆಷನ್ಗಳನ್ನು ಹೊಂದಿರುತ್ತದೆ. SCO ಸದಸ್ಯ ರಾಷ್ಟ್ರಗಳಿಗೆ ಮಾತ್ರ ಮೀಸಲಾದ ಒಂದು ಸೆಷನ್ ಮತ್ತು ನಂತರ ವೀಕ್ಷಕರು ಮತ್ತು ಅಧ್ಯಕ್ಷ ರಾಷ್ಟ್ರದ ವಿಶೇಷ ಆಹ್ವಾನಿತರು ಭಾಗವಹಿಸುವ ಸಾಧ್ಯತೆಯಿರುವ ವಿಸ್ತೃತ ಸೆಷನ್.
Prime Minister Narendra Modi, Chinese President Xi Jinping, Russian President Vladimir Putin, Pakistan PM Shehbaz Sharif, Uzbek President Shavkat Mirziyoyev & other leaders pose for a group photograph at Shanghai Cooperation Organisation (SCO ) Summit in Uzbekistan's Samarkand pic.twitter.com/RaTuXFhS3J
— ANI (@ANI) September 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.