ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತವಾಗಿದೆ, ಅದರ 11 ಶಾಸಕರಲ್ಲಿ ಎಂಟು ಮಂದಿ ಶಾಸಕರು ಇಂದು ಆಡಳಿತರೂಢ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಉನ್ನತ ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ನೇತೃತ್ವದಲ್ಲಿ ಈ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು ಎಂದು ಮೂಲಗಳು ವರದಿ ಮಾಡಿವೆ.
ಪಕ್ಷಕ್ಕೆ ಆಗಮಿಸಿದ ನಾಯಕರನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ವಾಗತಿಸಿದ್ದಾರೆ. ಈ ಶಾಸಕರು ಪಕ್ಷದ ಮೂರನೇ ಎರಡರಷ್ಟು ಬಲವನ್ನು ಹೊಂದಿರುವುದರಿಂದ, ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಅವರು ಅನರ್ಹಗೊಳ್ಳುವುದನ್ನು ತಪ್ಪಿಸಬಹುದು.
ಗೋವಾ ವಿಧಾನಸಭೆಯಲ್ಲಿ, ಬಿಜೆಪಿ ಈಗಾಗಲೇ 40 ಶಾಸಕರ ಪೈಕಿ 20 ಶಾಸಕರನ್ನು ಹೊಂದಿದೆ. ಜೊತೆಗೆ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರು ಮತ್ತು ಮೂವರು ಸ್ವತಂತ್ರರ ಬೆಂಬಲ ಪಡೆದು ಸದನದಲ್ಲಿ 25 ಶಾಸಕರ ಬಹುಮತವನ್ನು ಹೊಂದಿದೆ. ಕಾಂಗ್ರೆಸ್ನಿಂದ ಎಂಟು ಮಂದಿ ಬಂದ ಹಿನ್ನೆಲೆಯಲ್ಲಿ ಈ ಸಂಖ್ಯೆ 33ಕ್ಕೆ ಏರಿದೆ. ಗೋವಾ ಫಾರ್ವರ್ಡ್ ಪಕ್ಷದ ಒಬ್ಬ ಶಾಸಕರ ಬೆಂಬಲದ ಹೊರತಾಗಿ ಕಾಂಗ್ರೆಸ್ನಲ್ಲಿ ಈಗ ಮೂವರು ಉಳಿದಿದ್ದಾರೆ. ಎಎಪಿ ಇಬ್ಬರು ಶಾಸಕರನ್ನು ಹೊಂದಿದ್ದು, ರೆವಲ್ಯೂಷನರಿ ಗೋನ್ಸ್ ಪಾರ್ಟಿ ಒಬ್ಬ ಶಾಸಕರನ್ನು ಹೊಂದಿದೆ.
Goa | 8 Congress MLAs join BJP
We have joined BJP to strengthen the hands of PM Modi & CM Pramod Sawant… ‘Congress chhodo, BJP ko jodo’: says former Congress MLA, Michael Lobo pic.twitter.com/LMSEAjqUXb
— ANI (@ANI) September 14, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.