ಬೆಂಗಳೂರು: ಸದಭಿರುಚಿಯ ಮಾಸಪತ್ರಿಕೆಯಾದ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜನೆ ಮಾಡುತ್ತಿದೆ. ಆಸಕ್ತರು ಅಕ್ಟೋಬರ್ 10ರ ಒಳಗಡೆ 3000 ಪದಗಳನ್ನು ಮೀರದಂತೆ ಕಥೆ ಬರೆದು ತಲುಪಿಸಬೇಕು.
ಕಥೆಗಳು ಸ್ವತಂತ್ರವಾಗಿರಬೇಕು, ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು,ಎಲ್ಲೂ ಸ್ವೀಕೃತವಾಗಿರಬಾರದು, ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ ಸಂಸ್ಥೆಗೆ ಕಳುಹಿಸಿರಬಾರದು, ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಪ್ರಥಮ ಸ್ಥಾನ ಪಡೆಯುವ ಕಥೆಗೆ 15,000 ರೂಪಾಯಿ ಬಹುಮಾನ ನೀಡಲಾಗುತ್ತದೆ. ಎರಡನೇ ಸ್ಥಾನ ಪಡೆಯುವ ಕಥೆಗೆ 12,000 ರೂಪಾಯಿ, ಮೂರನೇ ಸ್ಥಾನ ಪಡೆಯುವ ಕಥೆಗೆ 10,000 ರೂಪಾಯಿ ಬಹುಮಾನ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.