ಬಾಗ್ದಾದ್: ಇರಾನಿನ ಮಹಿಳೆಯೊಬ್ಬಳು ನೂರಾರು ಪುರುಷರು ಮಾಡಲಾಗದ ಕಾರ್ಯವನ್ನು ಮಾಡಿ ತೋರಿಸಿದ್ದಾಳೆ. ಈಕೆ ಇಸಿಸ್ ಕಮಾಂಡರ್ ಅಬು ಅನಸ್ನನ್ನು ಕೊಂದು ಹಾಕಿದ್ದಾಳೆ.
ತನ್ನನ್ನು ಲೈಂಗಿಕ ಜೀತದಾಳು ಆಗುವಂತೆ ಅಬು ಈ ಮಹಿಳೆಯನ್ನು ಪೀಡಿಸುತ್ತಿದ್ದ, ಇದರಿಂದ ಆಕ್ರೋಶಿತಳಾದ ಮಹಿಳೆ ಆತನನ್ನು ಕೊಂದು ಹಾಕಿದ್ದಾಳೆ. ಈ ಘಟನೆ ಇರಾಖ್ನ ತಲ್ ರೊಮನ್ ಜಿಲ್ಲೆಯಲ್ಲಿ ನಡೆದಿದೆ.
2014ರಲ್ಲಿ ಇರಾಖ್ನ ಮೊಸೂಲ್ನ್ನು ಇಸಿಸ್ ಉಗ್ರರು ವಶಪಡಿಸಿಕೊಂಡಿದ್ದಾರೆ. ಬಳಿಕ ಯಹೂದಿ ಮಹಿಳೆಯರನ್ನು ಇಲ್ಲಿ ತಮ್ಮ ಲೈಂಗಿಕ ಜೀತದಾಳುಗಳನ್ನಾಗಿಸಿಕೊಂಡಿದ್ದಾರೆ. ಕಳೆದ ವರ್ಷ 5,270 ಮತ್ತು ಈ ವರ್ಷ 3,000 ಯಹೂದಿ ಮಹಿಳೆಯರನ್ನು ಇವರು ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.
ಮುಸ್ಲಿಂಯೇತರ ಮಹಿಳೆಯರನ್ನು ಲೈಂಗಿಕತೆಗೆ ಬಳಸಿಕೊಳ್ಳುವುದು ಅಪರಾಧವಲ್ಲ ಎಂದು ಇಸಿಸ್ ಉಗ್ರರು ವಾದಿಸುತ್ತಾರೆ ಎಂಬುದಾಗಿ ಇವರಿಂದ ತಪ್ಪಿಸಿಕೊಂಡು ಬಂದಿದ್ದ ಯಹೂದಿ ಮಹಿಳೆಯೊಬ್ಬಳು ಮಾಧ್ಯಮಗಳಿಗೆ ತಿಳಿಸಿದ್ದಳು.
ಇದೀಗ ಇದೇ ರೀತಿ ಇರಾಕಿ ಮಹಿಳೆಯೊಬ್ಬಳನ್ನು ಲೈಂಗಿಕ ಜೀತದಾಳನ್ನಾಗಿಸಿ ಕಮಾಂಡರ್ನನ್ನು ಆಕೆ ಕೊಂದು ಹಾಕಿ ಲೋಕಮೆಚ್ಚುವ ಕಾರ್ಯ ಮಾಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.