ಮಂಗಳೂರು : ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸಮಾಡುತ್ತಿರುವ ಸುಮಾರು 350ಕ್ಕೂ ಹೆಚ್ಚು ಸಣ್ಣ ಪತ್ರಿಕೆಗಳನ್ನು ದಮನಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್ ವಿರುಧ ಸೆ.10ರಂದು 11 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಪ್ರತಿಭಟನೆ ನಡೆಸಲಿದೆ.
ರಾಜ್ಯದಲ್ಲಿ ಸಣ್ಣ ಪತ್ರಿಕೆಗಳಿಗೆ ತನ್ನದೆ ಆದ ಜವಾಬ್ದಾರಿಗಳಿವೆ, ಸರ್ಕಾರದ ಯೋಜನೆಗಳನ್ನುಗ್ರಾಮೀಣ ಭಾಗದ ದ್ವನಿಯಿಲ್ಲದ ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿ, ಸದಾ ಸರ್ಕಾರ ಮತ್ತು ಸಮಾಜವನ್ನು ಜಾಗೃತಗೊಳಿಸುವ ಕಾಳಜಿಯೊಂದಿಗೆ ಕೆಲಸಮಾಡುತ್ತಿವೆ.
ಪತ್ರಿಕೆಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಭಾವಿಸಿ ಸಮಾಜ ಗೌರವಿಸುವ ಸಂದರ್ಭದಲ್ಲಿ ವಾರ್ತಾ ಇಲಾಖೆ ಸಣ್ಣ ಪತ್ರಿಕೆಗಳನ್ನು ದಮನಿಸಲು ಜಾಹೀರಾತು ನೀತಿ-2013ರ ಜಾಹೀರಾತು ನಿಯಮ-2014ಕ್ಕೆ ಮೇ 8,2015ರಂದು ತಿದ್ದುಪಡಿ ತಂದು ಮರಣ ಶಾಸನವನ್ನು ರೂಪಿಸಿದಂತಾಗಿದೆ.
ಜಾಹೀರಾತು ಏಜೆನ್ಸಿಗಳ ಮಾಫೀಯಾಕ್ಕೆ ಒತ್ತೆಬಿದ್ದ ವಾರ್ತಾ ಇಲಾಖೆ ರಾತ್ರೋರಾತ್ರಿ ಪತ್ರಕರ್ತ ಸಂಘಟನೆಗಳಿಗೆ ಸಣ್ಣ ಸುಳಿವೂ ನೀಡದೆ ಜಾಹೀರಾತು ನೀತಿಯ ಪ್ರಸ್ತಾವನೆಗೆ ತಿದ್ದುಪಡಿ ತರುವುದರೊಂದಿಗೆ ಜಾಹೀರಾತು ನೀತಿಯ ಮೂಲ ಆಶಯವನ್ನೆ ಮಣ್ಣುಪಾಲು ಮಾಡಿದೆಎಂದು ಆರೋಪಿಸಲಾಗಿದೆ.
ಶ್ರೀ ವಿಶುಕುಮಾರ್ ಹಠವೋ-ವಾರ್ತಾ ಇಲಾಖೆ ಬಚಾವೋ ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಪ್ರತಿಭಟನೆ ನಡೆಸಲಿದೆ. ಸಂಘವು ರಾಜ್ಯದಲ್ಲಿ ಸಣ್ಣ ಪತ್ರಿಕೆಗಳಿಗೆ ತನ್ನದೆ ಆದ ಜವಾಬ್ದಾರಿಗಳಿವೆ, ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ದ್ವನಿಯಿಲ್ಲದ ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿ, ಸದಾ ಸರ್ಕಾರ ಮತ್ತು ಸಮಾಜವನ್ನು ಜಾಗೃತಗೊಳಿಸುವ ಕಾಳಜಿಯೊಂದಿಗೆ ಕೆಲಸಮಾಡುತ್ತಿವೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.