News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅತ್ಯಧಿಕ ವಿದೇಶಿ ನೇರ ಬಂಡವಾಳ: ಕರ್ನಾಟಕವೇ ನಂಬರ್‌ 1

ಬೆಂಗಳೂರು: 2021-22ರ ಹಣಕಾಸು ವರ್ಷದಲ್ಲಿ ಅತ್ಯಧಿಕ ವಿದೇಶಿ ನೇರ ಬಂಡವಾಳ ಸ್ವೀಕರಿಸಿದ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ದೇಶಕ್ಕೆ ಬಂದ ಒಟ್ಟು ವಿದೇಶಿ ಬಂಡವಾಳದಲ್ಲಿ ಕರ್ನಾಟಕದ ಪಾಲು 37.55% ಆಗಿದೆ.

ಅತ್ಯಧಿಕ ವಿದೇಶಿ ನೇರ ಬಂಡವಾಳ ಸ್ವೀಕರಿಸಿದ ಎರಡನೇ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ.

ಕರ್ನಾಟಕದಲ್ಲಿ ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್, ಆಟೋಮೊಬೈಲ್ ಉದ್ಯಮಗಳು ವಲಯ ಬಲಗೊಳ್ಳುತ್ತಿದ್ದು, ಹೆಚ್ಚಿನ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿದೆ.

ಕೇಂದ್ರ ಸರಕಾರವು ಜಾರಿಗೊಳಿಸುತ್ತಿರುವ ಸುಧಾರಣಾ ನೀತಿಗಳ ಫಲವಾಗಿ ಭಾರತಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ವಿದೇಶಿ ಬಂಡವಾಳಗಳು ಹರಿದು ಬರುತ್ತಿವೆ. ಸುಮಾರು 101 ದೇಶಗಳಿಂದ ಭಾರತವು ಎಫ್‌ಡಿಐ ಸ್ವೀಕರಿಸಿದೆ. ಇವುಗಳ ಪೈಕಿ ಸಿಂಗಾಪುರದಿಂದ ಭಾರತವು ಅತ್ಯಧಿಕ ಬಂಡವಾಳವನ್ನು ಸ್ವೀಕರಿಸಿದೆ. ನಂತರ ಅಮೆರಿಕದಿಂದ ಬಂಡವಾಳ ಹರಿದು ಬಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top