ನವದೆಹಲಿ: ಉತ್ತರಪ್ರದೇಶದ ಲಕ್ನೋದಲ್ಲಿ ಕೇಂದ್ರ ಸರ್ಕಾರವು ಮಾವಿನಹಣ್ಣಿನ ಮೆಗಾ ಕ್ಲಸ್ಟರ್ ಅನ್ನು ಅನುಮೋದಿಸಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಇದಕ್ಕಾಗಿ 100 ಕೋಟಿ ರೂಪಾಯಿ ವ್ಯಯಿಸಲಿದೆ.
‘ಉತ್ತರ ಪ್ರದೇಶ ಮಾವು ಮಹೋತ್ಸವ-2022’ ಉದ್ಘಾಟನೆಯ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು, ಈ ಮೆಗಾ ಕ್ಲಸ್ಟರ್ನಲ್ಲಿ ಲಕ್ನೋದ ಮಾವುಗಳನ್ನು ‘ಕಾಕೋರಿ ಬ್ರಾಂಡ್’ ಎಂದು ಕರೆಯಲಾಗುತ್ತದೆ ಎಂದರು.
”ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕೇಂದ್ರ ಸರಕಾರವು ಲಕ್ನೋದಲ್ಲಿ ಮಾವಿನಹಣ್ಣಿನ ಮೆಗಾ ಕ್ಲಸ್ಟರ್ ಅನ್ನು ಅನುಮೋದಿಸಿದೆ, ಇದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 100 ಕೋಟಿ ರೂ ವ್ಯಯಿಸಲಿದೆ” ಎಂದಿದ್ದಾರೆ.
ಈ ಕ್ಲಸ್ಟರ್ನಲ್ಲಿರುವ ಮಾವುಗಳನ್ನು ‘ಕಾಕೋರಿ ಬ್ರ್ಯಾಂಡ್’ ಎಂದು ಕರೆಯಲಾಗುವುದು, ಇದು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಕಾಕೋರಿ ಮಹಾನ್ ವೀರರಿಗೆ ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ಇಲಾಖೆಯ ಉಪಕ್ರಮದಲ್ಲಿ ಆಯೋಜಿಸಿದ್ದ ಮಾವು ಪ್ರದರ್ಶನಕ್ಕೆ ಭೇಟಿ ನೀಡಿ, ಲಕ್ನೋ ಮಾವು ಉತ್ಸವದ ಸ್ಮರಣಿಕೆ-2022 ಅನ್ನು ಬಿಡುಗಡೆ ಮಾಡಿದರು ಮತ್ತು ರಾಜ್ಯದ ಪ್ರಗತಿಪರ ರೈತರನ್ನು ಗೌರವಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.