ನವದೆಹಲಿ: ಹಿಂದೂ ದೇವರುಗಳಿಗೆ ಅವಹೇಳನ ಮಾಡುವುದನ್ನು ಬಾಲಿವುಡ್ ಮಂದಿ ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿಕೊಂಡಂತಿದೆ. ತಾಂಡವ್, ಪಿಕೆ ಮುಂತಾದ ಸಿನಿಮಾಗಳ ಬಳಿಕ ಇದೀಗ ಮತ್ತೊಂದು ಸಿನಿಮಾದಲ್ಲಿ ಕಾಳಿ ದೇವಿಗೆ ಅವಮಾನ ಮಾಡಲಾಗಿದೆ.
ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ನಿರ್ದೇಶಿಸಿದ ಸಾಕ್ಷ್ಯಚಿತ್ರದ ಪೋಸ್ಟರ್ನಲ್ಲಿ ಹಿಂದೂ ದೇವತೆ ಕಾಳಿಗೆ ಅವಮಾನ ಮಾಡಲಾಗಿದೆ.
ಲೀನಾ ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಿದಮ್ಸ್ ಆಫ್ ಕೆನಡಾದ ಭಾಗವಾಗಿ ಅಗಾ ಖಾನ್ ಮ್ಯೂಸಿಯಂನಲ್ಲಿ ಇದನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಕಾಳಿ ವೇಷ ಧರಿಸಿದ ಯುವತಿಯು ಸಿಗರೇಟು ಸೇವನೆ ಮಾಡುತ್ತಿದ್ದಾಳೆ. LGBT ಸಮುದಾಯದ ಧ್ವಜ ಕೂಡ ಇದರಲ್ಲಿ ಇದೆ.
ನೆಟ್ಟಿಗರನ್ನು ಕೆರಳಿಸಿರುವ ಪೋಸ್ಟರ್, ಲೀನಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ‘#ArrestLeenaManimekal’ ಎಂಬ ಹ್ಯಾಶ್ಟ್ಯಾಗ್ ಪ್ರಸ್ತುತ ಟ್ರೆಂಡಿಂಗ್ ಆಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ. ಇಂತಹ ವರ್ತನೆಗಳನ್ನು ಸಹಿಸಲು ಅಸಾಧ್ಯ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
https://twitter.com/LeenaManimekali/status/1543200394477805568?ref_src=twsrc%5Etfw%7Ctwcamp%5Etweetembed%7Ctwterm%5E1543200394477805568%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fentertainment-news%2Fleena-manimekalai-draws-flak-for-deliberately-hurting-hindu-sentiments-with-poster-of-kaali-netizens-demand-strict-action-article-92641841
This is deliberately hurting the sentiments of Hindu devotees. Freedom of speech doesn’t mean— that one can cross the line and show anything in the garb of creativity.
How can this be allowed to even release on digital platforms? Kindly take a note. @ianuragthakur https://t.co/J4H9CS5eiu
— Sadhavi Speaks (@sadhavi) July 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.