ನವದೆಹಲಿ: ತೆಲಂಗಾಣ ರಾಜ್ಯದಲ್ಲಿ ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಯೋಜನೆ ಕಾರ್ಯಾರಂಭ ಮಾಡಿದೆ.
ರಾಮಗುಂಡಂನಲ್ಲಿ ಸುಮಾರು 100 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೋಲಾರ್ ಪವರ್ ಪ್ರಾಜೆಕ್ಟ್ ಕಾರ್ಯಾರಂಭ ಮಾಡಿದೆ. ಇದು ಎನ್ಟಿಪಿಸಿಯಿಂದ ನಿಯೋಜಿಸಲ್ಪಟ್ಟ ಭಾರತದ ಅತಿದೊಡ್ಡ ತೇಲುವ ಸೌರ ಸ್ಥಾವರವಾಗಿದೆ ಎಂದು ವರದಿಗಳು ತಿಳಿಸಿವೆ.
” 100 MW ರಾಮಗುಂಡಂ ತೇಲುವ ಸೋಲಾರ್ PV ಯೋಜನೆಯಲ್ಲಿ 20 MW ಕೊನೆಯ ಭಾಗದ ಸಾಮರ್ಥ್ಯದ ಯಶಸ್ವಿ ಕಾರ್ಯಾರಂಭದೊಂದಿಗೆ 1 ಜುಲೈ 2022 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಕಾರ್ಯಾಚರಣೆಯನ್ನು ಘೋಷಿಸಲಾಗಿದೆ” ಎಂದು ಶುಕ್ರವಾರ ವಿದ್ಯುತ್ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ನಲ್ಲಿ, ಎನ್ಟಿಪಿಸಿಯು ತೆಲಂಗಾಣದ ರಾಮಗುಂಡಂ ತೇಲುವ ಸೌರ ಯೋಜನೆಯಲ್ಲಿ ಹೆಚ್ಚುವರಿ 42.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವಾಣಿಜ್ಯಿಕವಾಗಿ ಕಾರ್ಯಾಚರಣೆಗೊಳಿಸಿತ್ತು.
NTPCಯ ಒಟ್ಟು ಸ್ಥಾಪಿತ ಸಾಮರ್ಥ್ಯವು ಈಗ 69,134.20 ಮೆಗಾವ್ಯಾಟ್ ತಲುಪಿದೆ. ಇದರಲ್ಲಿ 23 ಕಲ್ಲಿದ್ದಲು ಆಧಾರಿತ, ಏಳು ಅನಿಲ ಆಧಾರಿತ, ಒಂದು ಜಲವಿದ್ಯುತ್ ಮತ್ತು 19 ನವೀಕರಿಸಬಹುದಾದ ಇಂಧನ ಯೋಜನೆಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.