ನವದೆಹಲಿ: ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಭಾರತೀಯ ಸಂಜ್ಞಾ ಭಾಷೆಯ ವ್ಯಾಖ್ಯಾನದೊಂದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಕಿವಿ ಕೇಳದವರು ಕೂಡ ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದಾಗಿದೆ.
ಕಾಶ್ಮೀರ ಫೈಲ್ಸ್ ಭಾರತೀಯ ಸಂಜ್ಞಾ ಭಾಷೆಯ ವ್ಯಾಖ್ಯಾನದೊಂದಿಗೆ ಬಿಡುಗಡೆಯಾಗಿರುವ ಮೊದಲ ಬಾಲಿವುಡ್ ವಾಣಿಜ್ಯ ಸಿನಿಮಾವಾಗಿದೆ. ಶ್ರವಣ ದೋಷ ಹೊಂದಿದ ಸಮುದಾಯಕ್ಕೆ ಒಂದು ಮೈಲಿಗಲ್ಲು. ಭಾರತೀಯ ಸಂಜ್ಞಾ ಭಾಷೆ (ISL) ಯನ್ನು ಭಾಷಾಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞರ ತಂಡವು 1986 ರಲ್ಲಿ ಅಭಿವೃದ್ಧಿಪಡಿಸಿತು. ಇದು ಭಾರತದಲ್ಲಿ ಅನೇಕರು ಬಳಸುವ ಭಾಷೆಯಾಗಿದೆ, ಕಿವುಡರಲ್ಲದ ಆದರೆ ಶೈಕ್ಷಣಿಕ ಉದ್ದೇಶಗಳಿಗಾಗಿ ಇದನ್ನು ಕಲಿಯುತ್ತಿರುವವರು ಕೂಡ ಇದ್ದಾರೆ.
ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಓಟದೊಂದಿಗೆ ಪ್ರದರ್ಶನಗೊಂಡ ಕಾಶ್ಮೀರ ಫೈಲ್ಸ್ ಈಗ ZEE5 ನಲ್ಲಿ ಮೇ 13 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಭಾರತೀಯ ಸಂಜ್ಞಾ ಭಾಷೆಯಲ್ಲಿ ಪ್ರೀಮಿಯರ್ ಆಗುತ್ತಿದೆ. ZEE5 ಭಾರತೀಯ ಸಂಜ್ಞಾ ಭಾಷೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದು, ಇದರಲ್ಲಿ ಶ್ರವಣ ದೋಷವುಳ್ಳ 500 ಜನರು ಭಾಗಿಯಾಗಲಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಅವರ ಪತ್ನಿ, ನಟಿ ಪಲ್ಲವಿ ಜೋಶಿ ಮತ್ತು ನಟ ದರ್ಶನ್ ಕುಮಾರ್ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
#TheKashmirFiles created an unprecedented world record by translating the film in Indian Sign Language for the DEAF.
I have never received so much love as from my dear brothers & sisters. Bigger than any Oscar. WATCH. pic.twitter.com/rfVpPFI61r
— Vivek Ranjan Agnihotri (@vivekagnihotri) May 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.