ಬೆಂಗಳೂರು: ಶೀಘ್ರದಲ್ಲಿ ನಮ್ಮ ಮೆಟ್ರೋ ಸೌರಶಕ್ತಿಯನ್ನು ಪಡೆಯಲಿದೆ. 2023ರೊಳಗೆ ಹಂತ 2, 2ಎ ಮತ್ತು 2ಬಿ ಮೆಟ್ರೋ ನಿಲ್ದಾಣಗಳ ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಮೆಟ್ರೋ ನಿಲ್ದಾಣಕ್ಕೆ ಬೇಕಾಗುವ ವಿದ್ಯುತ್ ಬೆಳಕು, ಎಸ್ಕಲೇಟರ್ ಮತ್ತು ಎಸಿಗೆ ಅಗತ್ಯವಿರುವ ಹೆಚ್ಚಿನ ವಿದ್ಯುತ್ ಅನ್ನು ಕೂಡ ಸೌರಶಕ್ತಿಯ ಮೂಲಗಳಿಂದ ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
2023ರ ವೇಳೆಗೆ ಸೌರ ವಿದ್ಯುತ್ನಿಂದ ಮಾಸಿಕ 28.5 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ನಿರೀಕ್ಷೆಯಿದೆ, ಇದರರಿಂದ 1.7 ಕೋಟಿ ರೂಪಾಯಿ ಹಣ ಉಳಿತಾಯವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
2023ರೊಳಗೆ ಕೆಲವು ಆಯ್ದ ನಿಲ್ದಾಣಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ನಿರ್ಧಾರ ಮಾಡಲಾಗಿದೆ. ಲೈಟ್, ಫ್ಯಾನ್, ಎಸ್ಕಲೇಟರ್, ಎಸಿ ಇತ್ಯಾದಿಗಳಿಗೆ ಸೌರ ವಿದ್ಯುತ್ತನ್ನು ಬಳಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮೆಟ್ರೋ ರೈಲು ಓಡಾಟಕ್ಕೆ ಮಾಸಿಕ 3.9 ಕೋಟಿ ರೂಪಾಯಿ ವಿದ್ಯುತ್ ವೆಚ್ಚ ತಗಲುತ್ತದೆ. ಸೌರವಿದ್ಯುತ್ ಬಳಕೆಯಿಂದ 1.7 ಕೋಟಿ ರೂಪಾಯಿ ಉಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.