ನವದೆಹಲಿ: ʼಕಾಶ್ಮೀರ್ ಫೈಲ್ಸ್ʼ ಸಿನಿಮಾಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಿನ್ನೆ ಸಿನಿಮಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಅವರ ಪತ್ನಿ ಮತ್ತು ನಟಿ ಪಲ್ಲವಿ ಜೋಶಿ ಮತ್ತು ಚಿತ್ರದ ನಿರ್ಮಾಪಕ ಅಭಿಷೇಕ್ ಸೇರಿದಂತೆ ಚಿತ್ರದ ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು.
ಸಿನಿಮಾ ತಂಡವನ್ನು ಮೋದಿ ಅಭಿನಂದಿಸಿದರು ಮತ್ತು ಸಿನಿಮಾದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ʼಕಾಶ್ಮೀರ್ ಫೈಲ್ಸ್ʼ ಕಾಶ್ಮೀರ ನರಮೇಧದ ಕ್ರೂರ ಕಥೆಯನ್ನು ದೊಡ್ಡ ಪರದೆಯ ಮೇಲೆ ಅಚ್ಚುಕಟ್ಟಾಗಿ ಮೂಡಿಸಿದೆ. 1990 ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ಅವರನ್ನು ಅವರ ನೆಲದಿಂದಲೇ ಹೊರಹಾಕಿದ ಅಮಾನವೀಯ ಕೃತ್ಯ ಮತ್ತು ಹತ್ಯೆಯನ್ನು ಸಿನಿಮಾ ಪ್ರಮಾಣಿಕವಾದ ರೀತಿಯಲ್ಲಿ ಜನರ ಮುಂದಿಟ್ಟಿದೆ. ಆ ಕರಾಳ ಇತಿಹಾಸವನ್ನು ಜನಸಾಮಾನ್ಯರಿಗೆ ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿದೆ.
ಕಾಶ್ಮೀರ ಫೈಲ್ಸ್ ಮಾರ್ಚ್ 11 ರಂದು ತೆರೆ ಮೇಲೆ ಅಪ್ಪಳಿಸಿದ್ದು, ಮೊದಲ ದಿನವೇ 3.55 ಕೋಟಿ ರೂ ಗಳಿಸಿದೆ.
'THE KASHMIR FILES' TEAM MEETS PM MODI… #TheKashmirFiles producers #AbhishekAgarwal, #PallaviJoshi and #VivekRanjanAgnihotri [who has directed the film] met Hon. Prime Minister Shri #NarendraModi ji… The Prime Minister appreciated the team as well as the film. pic.twitter.com/OO27CsvT1n
— taran adarsh (@taran_adarsh) March 12, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.