ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದಲ್ಲಿ ಪ್ರಮುಖ ಜಾಗತಿಕ ಕಂಪನಿಗಳು ತಮ್ಮ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಮ್ಯಾಕ್ ಡೊನಾಲ್ಡ್, ಪೆಪ್ಸಿಕೊ, ಸ್ಟಾರ್ಬಕ್ಸ್, ಕೊಕೋ ಕೋಲಾ, ಜನರಲ್ ಎಲೆಕ್ಟ್ರಿಕ್- ಯುಬಿಕ್ವಿಟಸ್ ಗ್ಲೋಬಲ್ ಬ್ರ್ಯಾಂಡ್, ಹಲವು ಅಮೆರಿಕದ ದಿಗ್ಗಜ ಕಂಪನಿಗಳು ರಷ್ಯಾದಲ್ಲಿ ಉದ್ಯಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿವೆ. ರಷ್ಯಾದ ಅತಿಕ್ರಮಣವನ್ನು ವಿರೋಧಿಸಿ ಈ ನಿರ್ಧಾರಗಳನ್ನು ತೆಗೆದುಕೊಂಡಿವೆ.
“ಉಕ್ರೇನ್ನಲ್ಲಿ ಸಂಭವಿಸುತ್ತಿರುವ ಅಗತ್ಯವೇ ಇಲ್ಲದ ಮಾನವ ಸಂಕಷ್ಟಗಳನ್ನು ನಾವು ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲ” ಎಂದು ಮ್ಯಾಕ್ ಡೊನಾಲ್ಡ್ ಸಿಇಒ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಷ್ಯಾದಲ್ಲಿನ 850 ಸ್ಟೋರ್ಗಳನ್ನು ಸ್ಥಗಿತಗೊಳಿಸುತ್ತೇವೆ, ಆದರೂ ಮ್ಯಾಕ್ ಡೊನಾಲ್ಡ್ ಬ್ರ್ಯಾಂಡ್ಗಾಗಿ ತಮ್ಮ ಜೀವನ ಮುಡುಪಾಗಿಟ್ಟಿರುವ ಅಲ್ಲಿನ 62,000 ಉದ್ಯೋಗಿಗಳಿಗೆ ವೇತನ ಮುಂದುವರಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಸ್ಟೋರ್ಗಳನ್ನು ಯಾವಾಗ ತೆರೆಯಲಾಗುವುದು ಎಂಬ ಬಗ್ಗೆ ಯಾವುದೇ ಐಡಿಯಾ ಇಲ್ಲ ಎಂದಿದ್ದಾರೆ.
ಸ್ಟಾರ್ಬಕ್ಸ್ ಕೂಡ ತನ್ನ 130 ರಷ್ಯಾದ ಸ್ಟೋರ್ಗಳನ್ನು ಬಂದ್ ಮಾಡುವುದಾಗಿ ಮತ್ತು ಅಲ್ಲಿನ 2,000 ಉದ್ಯೋಗಿಗಳಿಗೆ ಪಾವತಿಸುವುದಾಗಿ ಘೋಷಣೆ ಮಾಡಿದೆ.
ಪೆಪ್ಸಿಕೋ ಕೂಡ ರಷ್ಯಾದಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.