ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರು ವಡೋದರ ಮತ್ತು ಅವರು ಚಹಾ ಮಾರುತ್ತಿದ್ದ ರೈಲ್ವೇ ಸ್ಟೇಶನ್ ಈಗ ಗುಜರಾತ್ ಸರ್ಕಾರದ ಟೂರಿಸ್ಟ್ ಕಾರ್ಪೋರೇಶನ್(ಟಿಸಿಜಿಎಲ್)ನ ಪ್ರವಾಸಿ ಪ್ಯಾಕೇಜ್ನ ಒಂದು ಭಾಗವಾಗಿದೆ.
ವಡೋದರದ ಮೆಹಸನ ಜಿಲ್ಲೆ ಮತ್ತು ಅದರ ಸ್ಥಳೀಯ ರೈಲ್ವೇ ಸ್ಟೇಶನ್ಗೆ ಒಂದು ದಿನದ ಪ್ರವಾಸ ಕೈಗೊಳ್ಳಬೇಕಾದರೆ ಪ್ರತಿಯೊಬ್ಬರು ತಲಾ ರೂ.600 ಪಾವತಿಸಬೇಕಾಗಿದೆ. ಈ ಪ್ರವಾಸಿ ಪ್ಯಾಕೇಜ್ ಬಗ್ಗೆ ಟಿಸಿಜಿಎಲ್ ತನ್ನ ವೆಬ್ಸೈಟ್ನಲ್ಲಿ ಪ್ರಚಾರವನ್ನೂ ಮಾಡುತ್ತಿದೆ.
ಈ ವರ್ಷದ ಜನವರಿಯಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಸಮಿತ್ನಲ್ಲಿ ಇದನ್ನು ಘೋಷಿಸಲಾಗಿತ್ತು, ಇದಕ್ಕೆ ಈಗ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.
ಮೋದಿಯವರು ಬೆಳೆದ ಮನೆ, ಅವರು ಓದಿದ ಶಾಲೆ ಸೇರಿದಂತೆ ಅನೇಕ ಸ್ಥಳಗಳಿಗೆ ಈ ಪ್ರವಾಸಿ ಪ್ಯಾಕೇಜ್ ಮೂಲಕ ಭೇಟಿ ಕೊಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.