ನವದೆಹಲಿ: ಭಾರತೀಯ ಮೂಲದ ಪ್ರೊಫೆಸರ್ ಸೌಮಿತ್ರ ದತ್ತಾ ಅವರು ಆಕ್ಸ್ಫರ್ಡ್ ಬ್ಯುಸಿನೆಸ್ ಸ್ಕೂಲ್ನ ಹೊಸ ಡೀನ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಪ್ರೊಫೆಸರ್ ದತ್ತಾ ಅವರು ನ್ಯೂಯಾರ್ಕ್ನ ಕಾರ್ನೆಲ್ ವಿಶ್ವವಿದ್ಯಾನಿಲಯದ ಕಾರ್ನೆಲ್ ಎಸ್ಸಿ ಜಾನ್ಸನ್ ಕಾಲೇಜ್ ಆಫ್ ಬ್ಯುಸಿನೆಸ್ನಲ್ಲಿ ಮ್ಯಾನೇಜ್ಮೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಜೂನ್ 1, 2022 ರಂದು ಡೀನ್ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
ಪ್ರೊಫೆಸರ್ ದತ್ತಾ ಅವರ ಸಂಶೋಧನೆ ಮತ್ತು ಪ್ರಭಾವವು ಅಮೆರಿಕಾದ ಗಡಿಗಳನ್ನು ಮೀರಿ ವಿಸ್ತರಿಸಿದೆ. ಅವರು ಎರಡು ಪ್ರಮುಖ ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಸೂಚ್ಯಂಕಗಳ ಸಹ-ಸಂಸ್ಥಾಪಕರಾಗಿದ್ದಾರೆ. ಅದೆಂದರೆ ನೆಟ್ವರ್ಕ್ ರೆಡಿನೆಸ್ ಇಂಡೆಕ್ಸ್- ವರ್ಲ್ಡ್ ಎಕನಾಮಿಕ್ ಫೋರಮ್ (WEF) ನಿಂದ 15 ವರ್ಷಗಳ ಕಾಲ ಪ್ರಕಟಗೊಂಡಿತ್ತು. ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್- ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯಿಂದ 10 ವರ್ಷಗಳ ಕಾಲ ಪ್ರಕಟಗೊಂಡಿತ್ತು.
ಜೊತೆಗೆ, ದತ್ತಾ ರಾಷ್ಟ್ರೀಯ ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿಗಳನ್ನು ರೂಪಿಸುವಲ್ಲಿ ಹಲವಾರು ಸರ್ಕಾರಗಳೊಂದಿಗೆ ಕೆಲಸ ಮಾಡಿದ್ದಾರೆ.
“ಶಾಲೆಯ ಡೀನ್ ಆಗಿ ನೇಮಕಗೊಂಡಿರುವುದು ಗೌರವವಾಗಿದೆ, ಇದು ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿಶಿಷ್ಟ ಸಂಸ್ಥೆಯಾಗಿದೆ. ಆಕ್ಸ್ಫರ್ಡ್ ಸೈದ್ ಮತ್ತು ಆಕ್ಸ್ಫರ್ಡ್ನಾದ್ಯಂತ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ಸಹಕರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.