ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಚಾಲಕನಾಗಿರುವ ಭಾರತೀಯ ಮೂಲದ ಸಿಖ್ ವ್ಯಕ್ತಿ ‘ಆಸ್ಟ್ರೇಲಿಯನ್ ಆಫ್ ದಿ ಡೇ’ ಗೌರವಕ್ಕೆ ಪಾತ್ರನಾಗಿದ್ದಾನೆ.
ತೇಜೆಂದರ್ ಪಾಲ್ ಸಿಂಗ್ ಕಳೆದ 3 ವರ್ಷಗಳಿಂದ ಡಾರ್ವಿನ್ನಲ್ಲಿ ವಸತಿ ಹೀನ ಬಡ ವ್ಯಕ್ತಿಗಳಿಗೆ ಆಹಾರ ನೀಡಿ ಪೋಷಿಸುತ್ತಿದ್ದಾನೆ. ಈತನ ಈ ನಿಸ್ವಾರ್ಥ ಸೇವೆಗಾಗಿ ಕಳೆದ ಭಾನುವಾರವನ್ನು ಅರ್ಪಿಸಲಾಗಿದೆ.
ಪ್ರತಿ ದಿನ 30 ಕಿಲೋ ಭಾರತೀಯ ಆಹಾರವನ್ನು ತಯಾರಿಸುವ ತೇಜೆಂದರ್ ಅದನ್ನು ಬಡವರಿಗೆ ನೀಡುತ್ತಾನೆ. ಈತನ ವ್ಯಾನ್ನ ಮೇಲೆ ‘ಹಸಿದವರಿಗೆ. ಅಗತ್ಯವಿರುವವರಿಗೆ ಉಚಿತ ಭಾರತೀಯ ಆಹಾರಗಳು’ ಎಂಬ ಬರಹವನ್ನು ಬರೆಯಲಾಗಿದೆ.
‘ದುಡಿಮೆಯ ಶೇ.10ರಷ್ಟನ್ನು ಬಡಬಗ್ಗರಿಗೆ ದಾನ ಮಾಡಬೇಕು ಎಂದು ನನ್ನ ಧರ್ಮ ಹೇಳುತ್ತದೆ, ಹೀಗಾಗಿ ಬಡವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ, ಇದರಿಂದ ಅವರು ಸಂತುಷ್ಟರಾಗುತ್ತಾರೆ’ ಎಂದು 35 ವರ್ಷದ ತೇಜೆಂದರ್ ಹೇಳುತ್ತಾರೆ.
ಆಸ್ಟ್ರೇಲಿಯಾದಲ್ಲಿ ಮಹತ್ವದ ಬದಲಾವಣೆ ತಂದ ಇವರಿಗೆ ಕಾಮನ್ವೆಲ್ತ್ ಬ್ಯಾಂಕ್ ‘ಆಸ್ಟ್ರೇಲಿಯನ್ ಆಫ್ ದಿ ಇಯರ್’ ಬಿರುದನ್ನೂ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.