ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಉತ್ಖನನದ ಸಂದರ್ಭದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬುದ್ಧನ ದೇವಾಲಯ ಹಾಗೂ ಉಂಗುರ ಮತ್ತು ನಾಣ್ಯದ ನಿಧಿ ಬೆಳಕಿಗೆ ಬಂದಿದೆ.
ಪಾಕಿಸ್ಥಾನಿ ಮತ್ತು ಇಟಾಲಿಯನ್ ಪುರಾತತ್ವಶಾಸ್ತ್ರಜ್ಞರ ಜಂಟಿ ತಂಡವು ವಾಯುವ್ಯ ಪಾಕಿಸ್ಥಾನದಲ್ಲಿ ನಡೆಸಿದ ಉತ್ಖನನದ ವೇಳೆ 2,300 ವರ್ಷಗಳಷ್ಟು ಹಳೆಯದಾದ ಬೌದ್ಧರ ಕಾಲದ ಅಪ್ಸಿಡಾಲ್ ದೇವಾಲಯ ಮತ್ತು ಇತರ ಕೆಲವು ಅಮೂಲ್ಯ ಕಲಾಕೃತಿಗಳನ್ನು ಪತ್ತೆ ಆಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಬರಿಕೋಟ್ ತೆಹಸಿಲ್ನಲ್ಲಿರುವ ಬೌದ್ಧರ ಕಾಲದ ಬಜಿರಾ ನಗರದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ, ಇದನ್ನು ಬೌದ್ಧರ ಅವಧಿಯ ಪಾಕಿಸ್ಥಾನದ ಅತ್ಯಂತ ಹಳೆಯ ದೇವಾಲಯ ಎಂದು ಹೇಳಲಾಗಿದೆ.
ದೇವಾಲಯದ ಹೊರತಾಗಿ, ಪುರಾತತ್ತ್ವಜ್ಞರು ಬೌದ್ಧರ ಕಾಲದ 2,700 ಕ್ಕೂ ಹೆಚ್ಚು ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದಾರೆ, ಇದರಲ್ಲಿ ನಾಣ್ಯಗಳು, ಉಂಗುರಗಳು, ಮಡಕೆಗಳು ಮತ್ತು ಗ್ರೀಸ್ ರಾಜ ಮೆನಾಂಡರ್ ಅವಧಿಯ ಖರೋಸ್ತಿ ಭಾಷೆಯ ಬರವಣಿಗೆ ಸೇರಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.