
ನವದೆಹಲಿ: 2025-26ರ ವೇಳೆಗೆ 300 ಬಿಲಿಯನ್ ಡಾಲರ್ ಆದಾಯವನ್ನು ಸಾಧಿಸುವ ತನ್ನ ಬದ್ಧತೆಯನ್ನು ಸಾಧಿಸಲು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ (ESDM) ಉದ್ಯಮಕ್ಕೆ ಸರ್ಕಾರ ಎಲ್ಲಾ ರೀತಿಯ ರಚನಾತ್ಮಕ, ಕಾರ್ಯವಿಧಾನ ಮತ್ತು ಅನುಸರಣೆ ಬೆಂಬಲವನ್ನು ನೀಡಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನಲ್ಲಿ ಬುಧವಾರ ನಡೆದ ‘ಆಜಾದಿ ಕಾ ಡಿಜಿಟಲ್ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅಚಿವ ಅಶ್ವಿನಿ, 2025-26ರ ವೇಳೆಗೆ 300 ಬಿಲಿಯನ್ ಡಾಲರ್ ಆದಾಯವನ್ನು ತಂದುಕೊಡುವ ಬಗ್ಗೆ ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮಗಳು ಸರ್ಕಾರಕ್ಕೆ ನೀಡಿರುವ ಭರವಸೆ ನನ್ನಲ್ಲಿ ವಿಶ್ವಾಸ ಮೂಡಿಸಿವೆ” ಎಂದಿದ್ದಾರೆ.
ಜಗತ್ತು ಈಗ ಭಾರತದ ಕಡೆಗೆ ತೆರೆದುಕೊಳ್ಳುತ್ತಿದೆ ಮತ್ತು ದೇಶವನ್ನು ಉತ್ಪಾದನಾ ಕೇಂದ್ರವಾಗಿ ಪರಿಗಣಿಸುತ್ತಿದೆ ಎಂಬುದಾಗಿ ಸಚಿವರು ಹೇಳಿದ್ದಾರೆ.
“ಇಂದು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಯು 2025-26ರ ವೇಳೆಗೆ 300 ಬಿಲಿಯನ್ ಡಾಲರ್ ಆದಾಯವನ್ನು ದೇಶಕ್ಕೆ ತಂದುಕೊಡಲು ಬದ್ಧವಾಗಿವೆ. ಈ ಬಗ್ಗೆ ಅವುಗಳು ಸರ್ಕಾರಕ್ಕೆ ಭರವಸೆ ನೀಡಿದೆ. ಅವುಗಳ ಗುರಿ ತಲುಪುವಿಕೆಗೆ ಬೇಕಾದ ಎಲ್ಲಾ ನೆರವನ್ನು ಸರ್ಕಾರ ನೀಡಲಿದೆ” ಎಂದು ಅವರು ಹೇಳಿದ್ದಾರೆ.
“ನಾವು ಟೆಲಿಕಾಂನಲ್ಲಿ ಮುಂಚೂಣಿಯಲ್ಲಿದ್ದೇವೆ. ನಮ್ಮ 5G ಸ್ಟಾಕ್ ವಿಶ್ವದ ಮೊದಲ ವರ್ಚುವಲೈಸ್ಡ್ 5G ಸ್ಟಾಕ್ ಆಗಿರುತ್ತದೆ. ಈಗ ನಾವು ಬೇರೆ ಮಟ್ಟದಲ್ಲಿ ಉತ್ಪಾದನೆಯ ಬಗ್ಗೆ ಯೋಚಿಸಬೇಕು, ಏಕೆಂದರೆ ಪ್ರಪಂಚವು ತಿರುವ ನೋಡುವಂತಹ ಪರಿಸರ ವ್ಯವಸ್ಥೆಗಳ ಕಡೆಗೆ ನಾವು ಚಲಿಸಬೇಕು, ವಿಶ್ವದಾದ್ಯಂಯ ನಾವು ಟೆಲಿಕಾಂ ನೆಟ್ವರ್ಕ್ ಅನ್ನು ನಿರ್ವಹಿಸಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


