ನವದೆಹಲಿ: ಹಿಂಸೆಯನ್ನು ಪಾಲಿಸುತ್ತಿರುವ ಅಫ್ಘಾನಿಸ್ಥಾನದ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡದಿರಲು ಯುರೋಪಿಯನ್ ಒಕ್ಕೂಟ ನಿರ್ಧರಿಸಿದೆ. ಮಾತ್ರವಲ್ಲದೇ ಪಾಕಿಸ್ಥಾನ ಮತ್ತು ಚೀನಾವನ್ನು ಹೊರತುಪಡಿಸಿ ಇಡೀ ಜಗತ್ತು ತಾಲಿಬಾನ್ ವಿರೋಧಿ ನಿಲುವನ್ನು ತಾಳಿದೆ. ಆದರೆ ಅಲ್ಲಿನ ಜನರ ಈಗಿನ ಪರಿಸ್ಥಿತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿವೆ.
ಹಿಂಸಾಚಾರದ ಮೂಲಕ ಹೇರಿದ ತಾಲಿಬಾನ್ ಆಡಳಿತವನ್ನು ಯುರೋಪಿಯನ್ ಯೂನಿಯನ್ ಗುರುತಿಸುವುದಿಲ್ಲ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.
” ಯುರೋಪಿಯನ್ ಯೂನಿಯನ್ ಹಿಂಸಾಚಾರದ ಮೂಲಕ ಹೇರಿದ ಹೊಸ ಆಡಳಿತವನ್ನು ಗುರುತಿಸುವುದಿಲ್ಲ, ಆದರೆ ಆ ದೇಶವು ಎದುರಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಕುಸಿತವನ್ನು ತಡೆಯುವ ಅಗತ್ಯವಿದೆ” ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಜನರ ಪರವಾಗಿ ನಿಲ್ಲುವ ಅಗತ್ಯವಿದೆ ಎಂದು ಹೇಳಿರುವ ಲೇಯೆನ್ ಅವರು ಅಫ್ಘಾನಿಸ್ಥಾನಕ್ಕೆ ಒದಗಿಸಲಾಗುತ್ತಿರುವ ಮಾನವೀಯ ನೆರವಿನ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ.
ರಷ್ಯಾ, ಅಮೆರಿಕ, ಜಪಾನ್, ಕೆನಡಾ, ಫ್ರಾನ್ಸ್ ಮತ್ತು ಯುಕೆ ತಾಲಿಬಾನ್ ರಚಿಸಿರುವ ಸರ್ಕಾರವನ್ನು ಗುರುತಿಸುವ ಚಿಂತನೆ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನ್ ದೇಶವು ಪ್ರಸ್ತುತ ಆಳವಾದ ಆರ್ಥಿಕ, ಮಾನವೀಯ ಮತ್ತು ಭದ್ರತಾ ಬಿಕ್ಕಟ್ಟಿನಿಂದ ಜರ್ಜರಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.