ನವದೆಹಲಿ: ಇಂದು ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಉದ್ಘಾಟನೆಗೊಂಡ ಹೊಸ ವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಪಾಡ್ ಪರಿಕಲ್ಪನೆಯ ವಿಶ್ರಾಂತಿ ಕೊಠಡಿಗಳು ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಸೌಕರ್ಯವನ್ನು ಒದಗಿಸುತ್ತದೆ.
ಕ್ಯಾಪ್ಸುಲ್ ಹೋಟೆಲ್ ಎಂದೂ ಕರೆಯಲ್ಪಡುವ ಪಾಡ್ ಹೋಟೆಲ್, ಹಲವಾರು ಸಣ್ಣ ಕೊಠಡಿಗಳು ಅಥವಾ “ಪಾಡ್ಗಳನ್ನು” ಹೊಂದಿದ್ದು, ಪ್ರತಿಯೊಂದೂ ಒಂದೇ ಬೆಡ್ ಅನ್ನು ಹೊಂದಿರುತ್ತದೆ. ಈ ಹೋಟೆಲ್ಗಳನ್ನು ಮೊದಲು ಜಪಾನ್ನಲ್ಲಿ ಪ್ರಯಾಣಿಕರಿಗೆ ಕಡಿಮೆ ವೆಚ್ಚ ಮತ್ತು ಆರಾಮದಾಯಕವಾದ ವಸತಿ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಯಿತು, ಈಗ ಇದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅರ್ಬನ್ ಪಾಡ್ ಭಾರತದಲ್ಲಿ ತೆರೆಯಲ್ಪಟ್ಟ ಮೊದಲ ಬಾಟಿಕ್ ಪಾಡ್ ಹೋಟೆಲ್ಗಳಲ್ಲಿ ಒಂದಾಗಿದೆ.
ರೈಲ್ವೆ ಸಚಿವಾಲಯವು ಹಂಚಿಕೊಂಡ ಫೋಟೋಗಳು ಮಹಾರಾಷ್ಟ್ರದ ಮುಂಬೈ ಸೆಂಟ್ರಲ್ ಸ್ಟೇಷನ್ನಲ್ಲಿರುವ ಅರ್ಬನ್ಪಾಡ್ ಹೋಟೆಲ್ನಲ್ಲಿನ ಪಾಡ್ ರೂಮ್ಗಳ ಸಾಲುಗಳನ್ನು ತೋರಿಸುತ್ತದೆ, ಇದನ್ನು ಪ್ರಯಾಣಿಕರು ಅಲ್ಪಾವಧಿಗೆ ಕಾಯ್ದಿರಿಸಬಹುದು.
ಮುಂಬೈ ಸೆಂಟ್ರಲ್ನಲ್ಲಿ ಹೊಸ ಪಾಡ್ ರೂಮ್ಗಳು ತೆಳು ಕಂದು, ಕಂದು ಮತ್ತು ಬಿಳಿ ಬಣ್ಣದ ಮ್ಯೂಟ್ ಶೇಡ್ಗಳಲ್ಲಿ ಇದೆ. ಪಾಡ್ಗಳು ಒಂದೇ ಹಾಸಿಗೆ, ಕನ್ನಡಿ ಮತ್ತು ವೈಯಕ್ತಿಕ ಸೇಫ್, ಇತರ ಸೌಕರ್ಯಗಳನ್ನು ಹೊಂದಿದೆ.
Travelling by train on a short business trip or taking a group of students on a tour, POD rooms at Mumbai Central station are here to make your journey comfortable and easy. pic.twitter.com/7yfbSfeZ9g
— Ministry of Railways (@RailMinIndia) November 17, 2021
— Ministry of Railways (@RailMinIndia) November 17, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.