ಇಸ್ಲಾಮಾಬಾದ್: ಭಾರತಕ್ಕೆ ಹೆದರಿ ತನ್ನ ಪರಮಾಣು ಸಾಮರ್ಥ್ಯವನ್ನು ಪಾಕಿಸ್ಥಾನ ಹೆಚ್ಚಿಸಿದರು, ಭಾರತದ ಸೇನಾ ಸಾಮರ್ಥ್ಯವನ್ನು ಸರಿಗಟ್ಟಲು ಆ ದೇಶಕ್ಕೆ ಸಾಧ್ಯವಾಗುತ್ತಿಲ್ಲ.
ಭಾರತ ಪಾಕಿಸ್ಥಾನದ ಏಕಮಾತ್ರ ಬಾಹ್ಯ ಬೆದರಿಕೆ ಎಂದು ಅಲ್ಲಿನ ಸೇನೆ ಸಂಸದೀಯ ಸಮಿತಿಗೆ ತಿಳಿಸಿರುವುದೇ ಇದಕ್ಕೆ ಸಾಕ್ಷಿ.
ಭಾರತ ಕಳೆದ ಎರಡು ವರ್ಷದಲ್ಲಿ 100 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಮುಂದಿನ ಐದು ವರ್ಷದಲ್ಲಿ ಮತ್ತೆ 100ಬಿಲಿಯನ್ ಡಾಲರ್ ತೆತ್ತು ಅದು ಶಸ್ತ್ರಾಸ್ತ್ರ ಖರೀದಿಸುವ ಸಾಧ್ಯತೆ ಇದೆ ಎಂದು ಪಾಕ್ ಸೇನೆ ಸಂಸದೀಯ ಸಮಿತಿಗೆ ತಿಳಿಸಿದೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ.
ಭಾರತ ಜಗತ್ತಿನ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರ. ಕಳೆದ ದಶಕಗಳಿಂದ ಅದರ ಸೇನಾ ವೆಚ್ಚ ದ್ವಿಗುಣಗೊಂಡಿದೆ. ಈ ವರ್ಷ ಅದರ ಮಿಲಿಟರಿ ಬಜೆಟ್ 40.07 ಬಿಲಿಯನ್ ಎಂದು ಪತ್ರಿಕೆ ತಿಳಿಸಿದೆ.
ಕೇವಲ ಸಾಂಪ್ರದಾಯಿಕ ಭದ್ರತಾ ಸಾವಲು ಮಾತ್ರವಲ್ಲದೇ, ಸೈಬರ್ ಸ್ಪೇಸ್ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.