ನವದೆಹಲಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬಿಎಸ್ಎನ್ಎಲ್ನ 4 ಜಿ ನೆಟ್ವರ್ಕ್ ಬಳಸಿ ಮೊದಲ ಕರೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಕೋನ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ.
ಬಿಎಸ್ಎನ್ಎಲ್ ಸಂಸ್ಥೆ ಭಾರತೀಯ ತಂತ್ರಜ್ಞಾನದ ನೆರವಿನಿಂದ 4 ಜಿ ನೆಟ್ವರ್ಕ್ ರೂಪಿಸಲು ಹಲವು ಸಮಯದಿಂದ ಕೆಲಸ ಮಾಡುತ್ತಿದೆ. ಈ ವರ್ಷದ ಜನವರಿಯಲ್ಲಿ, ಮುಂಬರುವ 4 ಜಿ ಟೆಂಡರ್ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಾರತೀಯ ಕಂಪನಿಗಳಿಂದ ಬಿಎಸ್ಎನ್ಎಲ್ ಪ್ರೂಫ್ ಆಫ್ ಕಾನ್ಸೆಪ್ಟ್ (ಪಿಒಸಿ) ಗಾಗಿ ಆಸಕ್ತಿಯನ್ನು ವ್ಯಕ್ತಪಡಿಸಿತ್ತು. ಇಲಾಖೆಯ ಮಾಹಿತಿಯ ಪ್ರಕಾರ, ಜುಲೈನಲ್ಲಿ 5 ಬಿಡ್ಡರ್ಗಳಿಗೆ ಉದ್ದೇಶ ಪತ್ರ ಜಾರಿಗೊಳಿಸಲಾಗಿದೆ.
ಹಾಗೆಯೇ ಬಿಎಸ್ಎನ್ಎಲ್ನ 4ಜಿಯು ಭಾರತದ ಹಲವು ನಗರಗಳಲ್ಲಿ ಲೈವ್ ಆಗಿದೆ. ಜೊತೆಗೆ ಡಿ. 31 ರ ವರೆಗೆ ಗ್ರಾಹಕರಿಗೆ ಉಚಿತ ಸಿಮ್ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.
Made first call over Indian 4G network of BSNL (Designed and Made in India).
PM @narendramodi Ji’s vision of Aatmanirbhar Bharat taking shape.— Ashwini Vaishnaw (@AshwiniVaishnaw) October 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.