ನವದೆಹಲಿ: ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ವಿಕ್ರಮ್ ದೊರೆಸ್ವಾಮಿ ಅವರು ಎರಡು ಲೈಫ್ ಸಪೋರ್ಟ್ ಆಂಬುಲೆನ್ಸ್ ಅನ್ನು ಭಾರತದ ವತಿಯಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಿದ್ದಾರೆ.
ಈ ಆಂಬ್ಯುಲೆನ್ಸ್ಗಳು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವರ್ಷದ ಮಾರ್ಚ್ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಘೋಷಿಸಿದ 109 ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ಗಳ ಭಾಗವಾಗಿದೆ.
ಆಂಬ್ಯುಲೆನ್ಸ್ಗಳನ್ನು ಹಸ್ತಾಂತರಿಸುವ ಸಮಾರಂಭವನ್ನು ಸಿಲ್ಹೆಟ್ನ ಓಸ್ಮಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಲಾಯಿತು. ಹಸ್ತಾಂತರ ಸಮಾರಂಭದಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ ಎ ಕೆ ಅಬ್ದುಲ್ ಮೊಮೆನ್ ಉಪಸ್ಥಿತರಿದ್ದರು.
ಈ ಹೊಚ್ಚಹೊಸ ಆಂಬ್ಯುಲೆನ್ಸ್ಗಳಿಗೆ ಆಧುನಿಕ, ನಿರ್ಣಾಯಕ ಜೀವ ಉಳಿಸುವ ಸಾಧನಗಳನ್ನು ಅಳವಡಿಸಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ರೋಗಿಗಳಿಗೆ ಗುಣಮಟ್ಟದ ತುರ್ತು ಆರೈಕೆ ಮತ್ತು ಜೀವ ಬೆಂಬಲವನ್ನು ಒದಗಿಸಲು ಅರೆವೈದ್ಯರು ಇದನ್ನು ಬಳಸಬಹುದು.
ಇನ್ನೊಂದೃಡೆ ಪಿಪಿಇ ಕಿಟ್ಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ಗಳು, ಲಸಿಕೆಗಳು, ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಅನುಭವ ಹಂಚಿಕೆ ಕಾರ್ಯಾಗಾರಗಳು ಮುಂತಾದ ವಿವಿಧ ಕ್ರಮಗಳ ಮೂಲಕ ಭಾರತವು ಬಾಂಗ್ಲಾದೇಶಕ್ಕೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಿದೆ.
ಬಾಂಗ್ಲಾದೇಶದ ಆಪ್ತ ಸ್ನೇಹಿತನಾಗಿ, ಭಾರತವು ಬಾಂಗ್ಲಾದೇಶಕ್ಕೆ ತನ್ನ ಸಾಮರ್ಥ್ಯದ ಮಿತಿಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ತನ್ನ ಕೈಲಾದಷ್ಟು ಸಹಾಯ ಮಾಡಲು ಬದ್ಧವಾಗಿದೆ ಎಂದು ಭಾರತದ ಹೈ ಕಮಿಷನ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.