ನವದೆಹಲಿ: ಜಪಾನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಫ್ಯೂಮಿಯೊ ಕಿಶಿದಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದರು. ಅಲ್ಲದೇ, ಪ್ರಾದೇಶಿಕ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.
ಟ್ವಿಟ್ ಮಾಡಿರುವ ಮೋದಿ, “ಜಪಾನ್ನ ಹೊಸ ಪ್ರಧಾನಮಂತ್ರಿ ಮಾನ್ಯ ಕಿಶಿದ ಫ್ಯೂಮಿಯೋ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ನಮ್ಮ ಪ್ರದೇಶದಲ್ಲಿ ಮತ್ತು ಅದರಾಚೆಗೆ ಶಾಂತಿ ಮತ್ತು ಸಮೃದ್ಧಿಯನ್ನು ಮುನ್ನಡೆಸಲು ನಾನು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
Congratulations and best wishes to the new Prime Minister of Japan, H.E. Kishida Fumio. I look forward to working with him to further strengthen the 🇮🇳-🇯🇵 Special Strategic and Global Partnership and advance peace and prosperity in our region and beyond. @kishida230
— Narendra Modi (@narendramodi) October 4, 2021
ಭಾರತ ಮತ್ತು ಜಪಾನ್ ನಡುವಿನ ಸ್ನೇಹವನ್ನು ಇಡೀ ಪ್ರದೇಶದ ಅತ್ಯಂತ ಸಹಜ ಪಾಲುದಾರಿಕೆ ಎಂದು ಪರಿಗಣಿಸಲಾಗಿದೆ. ಜಪಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಸ್ನೇಹಿತರಲ್ಲಿ ಒಬ್ಬ ಎಂದು ಈ ಹಿಂದೆ ಮೋದಿ ಹೇಳಿದ್ದರು.
ಸೋಮವಾರ, ಜಪಾನಿನ ಸಂಸದರು ಫ್ಯೂಮಿಯೊ ಕಿಶಿದಾ ಅವರನ್ನು ಹೊಸ ಪ್ರಧಾನಿಯಾಗಿ ಅಂಗೀಕರಿಸಲು ಮತ ಚಲಾಯಿಸಿದರು. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ಡಿಪಿ) 64 ವರ್ಷದ ಕಿಶಿದಾ ಅವರನ್ನು ಹೊಸ ನಾಯಕನಾಗಿ ಆಯ್ಕೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಸೆಪ್ಟೆಂಬರ್ನಲ್ಲಿ, ಹಾಲಿ ಪ್ರಧಾನಿ ಯೋಶಿಹೈಡೆ ಸುಗಾ ಅವರು ಎಲ್ಡಿಪಿಯ ಮುಖ್ಯಸ್ಥರಾಗಿ ಸ್ಪರ್ಧಿಸದಿರುವ ತಮ್ಮ ನಿರ್ಧಾರವನ್ನು ಘೋಷಿಸಿದ್ದರು, ಇದರರ್ಥ ಅವರು ಸರ್ಕಾರದ ಮುಖ್ಯಸ್ಥರಾಗಿ ರಾಜೀನಾಮೆ ನೀಡಿದ್ದಾರೆ ಎಂಬುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.