ನವದೆಹಲಿ: ಭಾರತವು ವಿಶ್ವದ ಔಷಧಾಲಯವಾಗುತ್ತಿರುವುದುಕಳೆದ 75 ವರ್ಷಗಳಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಅವರು ಆರೋಗ್ಯ ಸೇವೆಯಲ್ಲಿ ಭಾರತದ ಸಾಧನೆಗಳ ಪಟ್ಟಿಯನ್ನೂ ಮುಂದಿಟ್ಟಿದ್ದಾರೆ.
ಖಾಸಗಿ ಮಾಧ್ಯಮದ ಸ್ವಸ್ಥ್ ಭಾರತ್, ಸಂಪನ್ ಭಾರತ್ ಟೆಲಿಥಾನ್ ನಲ್ಲಿ ಮಾತನಾಡಿದ ಡಾ. ಸ್ವಾಮಿನಾಥನ್, ದೇಶದ ನಾಲ್ಕು ದೊಡ್ಡ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ಪೋಲಿಯೊ ನಿರ್ಮೂಲನೆ, ಇತರ ಕಾಯಿಲೆ ತಡೆಯಬಹುದಾದ ಲಸಿಕೆ , ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆಮಾಡಿದ್ದು, ಸಾರ್ವತ್ರಿಕ ಆರೋಗ್ಯ ರಕ್ಷಣೆ ಭಾರತದ ಸಾಧನೆ ಎಂದು ಅವರು, ಭಾರತ ವಿಶ್ವದ ಔಷಧಾಲವಾಗಿದ್ದು, 75 ವರ್ಷಗಳಲ್ಲಿನ ಅತಿ ದೊಡ್ಡ ಸಾಧನೆ ಎಂದಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕವು ಭಾರತ ಸೇರಿದಂತೆ ಪ್ರತಿಯೊಂದು ದೇಶದಲ್ಲೂ ಅಗತ್ಯ ಆರೋಗ್ಯ ಸೇವೆಗಳ ವಿತರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.