ನವದೆಹಲಿ: ಭಾರತೀಯ ಸೇನೆಯ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ಸಾಗುತ್ತಿವೆ. ಹೊಸ ಶಸ್ತ್ರಾಸ್ತ್ರಗಳನ್ನು, ಯುದ್ಧ ಪರಿಕರಗಳನ್ನು ಸೇನೆಯ ಬತ್ತಳಿಕೆಗೆ ಸೇರಿಸಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಿಟಿಯ ಅರ್ಜುನ್ ಎಂಕೆ-1ಎ.
ಕೇಂದ್ರ ರಕ್ಷಣಾ ಸಚಿವಾಲಯವು ಚೆನ್ನೈನಲ್ಲಿನ ಅವದಿ ಹೆವಿ ಬೈಕಲ್ ಫ್ಯಾಕ್ಟರಿಗೆ 118 ಮೈನ್ ಬ್ಯಾಟಲ್ ಟ್ಯಾಂಕ್ ಅರ್ಜುನ್ ಎಂಕೆ-1ಎಗೆ ಆರ್ಡರ್ ನೀಡಿದೆ.
7,500 ಕೋಟಿ ರೂಪಾಯಿಗಳ ಆದೇಶ ಇದಾಗಿದ್ದು, ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಲಿದೆ. ಮಾತ್ರವಲ್ಲದೆ, ಆತ್ಮ ನಿರ್ಭರ ಭಾರತದ ದೂರದೃಷ್ಟಿಗೆ ಇದು ಹೆಚ್ಚಿನ ಬಲ ತುಂಬಲಿದೆ.
ಮೈನ್ ಬ್ಯಾಟಲ್ ಟ್ಯಾಂಕ್ ಎಂಕೆ-1ಎಯು ಅರ್ಜುನ ಟ್ಯಾಂಕ್ ನ ಹೊಸ ರೂಪಾಂತರವಾಗಿದ್ದು, ಹೆಚ್ಚಿನ ಫೈಯರ್ ಪವರ್, ಚಲನಶೀಲತೆ ಮತ್ತು ಕಣ್ಗಾವಲನ್ನು ಬಲಪಡಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.