ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಭಾರತದಲ್ಲೇ ಸಿಲುಕಿರುವ ವಿದೇಶಿ ಪ್ರಜೆಗಳ ಭಾರತದ ವಿಸಾ ಅವಧಿಯನ್ನು ಸೆ. 30 ರ ವರೆಗೆ ಊರ್ಜಿತ ಎಂದು ಪರಿಗಣಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ವಿಮಾನಗಳಿಗೆ ನಿರ್ಬಂಧ ಹೇರಲಾಗಿದ್ದು, ಮಾರ್ಚ್ 2020 ರಿಂದ ವಿವಿಧ ರೀತಿಯ ವಿಸಾಗಳನ್ನು ಹೊಂದಿ ಭಾರತದಲ್ಲಿದ್ದ ವಿದೇಶೀ ಜನರು ಇಲ್ಲೇ ಸಿಲುಕಿಕೊಳ್ಳುವಂತಾಗಿದೆ. ಈ ನಿಟ್ಟಿನಲ್ಲಿ ವಿಸಾ ಅವಧಿಯನ್ನು ಸೆ. 30 ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಈಗಾಗಲೇ ಭಾರತವು ಕೊರೋನಾ ಹಿನ್ನೆಲೆಯಲ್ಲಿ ಈ ಮೊದಲೂ ಸಹ ವಿಸಾ ವಿಸ್ತರಣೆ ಮೂಲಕ, ಹೆಚ್ಚುವರಿ ದಂಡ ವಿಧಿಸದೆ ಉಚಿತ ಆಧಾರದ ಮೇಲೆ ನಿಬಂಧನೆ ಅವಧಿಯನ್ನು ಉಳಿಸಿಕೊಂಡಿದೆ. ಹಲವಾರು ದೇಶಗಳಿಗೆ ನಿಯಮಿತವಾಗಿ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿರುವ ಕಾರಣ ಈ ವಿಸ್ತರಣೆ ಮಾಡಲಾಗಿದೆ. ಸೆ. 30 ರ ವರೆಗೆ ವಿಸಾ ವಿಸ್ತರಣೆಗೆ ಅರ್ಜಿ ಸಲ್ಲಿಸುವ ಅಗತ್ಯತೆಯೂ ಇಲ್ಲ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.