ನವದೆಹಲಿ: ಭಾರತವು ಎರಡನೇ ಹಂತದಲ್ಲಿ ಉಡುಗೊರೆಯಾಗಿ ನೀಡಿದ 40 ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ಗಳು ಇಂದು ಬೆನಪೋಲ್ ಬಂದರಿನ ಮೂಲಕ ಬಾಂಗ್ಲಾದೇಶಕ್ಕೆ ತಲುಪಿವೆ.
ಈ ಆಂಬ್ಯುಲೆನ್ಸ್ಗಳು ಸೇರಿ ಈವರೆಗೆ ಒಟ್ಟು 71 ಆಂಬ್ಯುಲೆನ್ಸ್ಗಳನ್ನು ಭಾರತವು ಬಾಂಗ್ಲಾದೇಶಕ್ಕೆ ನೀಡಿದಂತಾಗಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಪ್ರಧಾನಿ ಮೋದಿ ಅವರು ಆಂಬ್ಯುಲೆನ್ಸ್ಗಳನ್ನು ಕೊಡುಗೆ ನೀಡುವುದಾಗಿ ಘೋಷಿಸಿದ್ದು, ಇವುಗಳು ಬಾಂಗ್ಲಾದೇಶಕ್ಕೆ ಕೊರೋನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ನೆರವಾಗಲಿದೆ.
ಈ ತಿಂಗಳ 17 ರಂದು 31 ಆಂಬ್ಯುಲೆನ್ಸ್ಗಳನ್ನು ಭಾರತವು ಬಾಂಗ್ಲಾದೇಶಕ್ಕೆ ಮೊದಲನೇ ಹಂತದಲ್ಲಿ ನೀಡಿತ್ತು. ಇನ್ನುಳಿದ ಆಂಬ್ಯುಲೆನ್ಸ್ಗಳು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಡಾಕಾಗೆ ತಲುಪುವ ಸಾಧ್ಯತೆ ಇದೆ. ಕೊರೋನಾ ಎದುರಿಸಲು ಬಾಂಗ್ಲಾದೇಶವನ್ನು ಬೆಂಬಲಿಸುವ ನಿಟ್ಟಿನಲ್ಲಿ ಭಾರತ ಈ ನೆರವಿನ ಹಸ್ತವನ್ನು ಚಾಚಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.