ನವದೆಹಲಿ: ಇಸ್ರೋದ ಚಂದ್ರಯಾನ – 2 ರ ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಉಪಕರಣವು ಚಂದ್ರನ ಮೇಲ್ಮೈನಲ್ಲಿರುವ ಹೈಡ್ರಾಕ್ಸಿಲ್ ಹಾಗೂ ನೀರಿನ ಕಣಗಳಿರುವುದನ್ನು ಪತ್ತೆ ಮಾಡಿದೆ.
ಈ ಸಂಬಂಧ ಕರೆಂಟ್ ಸೈನ್ಸ್ ಜರ್ನಲ್ನಲ್ಲಿ ಸಂಶೋಧನಾ ಲೇಖನ ಪ್ರಕಟವಾಗಿದ್ದು, ಐಐಆರ್ಎಸ್ ಸಹಾಯದಿಂದ ಚಂದ್ರಯಾನ – 2 ಬಾಹ್ಯಾಕಾಶ ನೌಕೆಯು ಹೈಡ್ರಾಕ್ಸಿಲ್ ಮತ್ತು ನೀರಿನ ಕಣಗಳ ನಡುವಿನ ವ್ಯತ್ಯಾಸ ಪತ್ತೆಹಚ್ಚುತ್ತದೆ ಎಂದು ಹೇಳಿದೆ. ಉಪಗ್ರಹ ಪತ್ತೆಹಚ್ಚಿದ ಆರಂಭಿಕ ದತ್ತಾಂಶಗಳ ಪ್ರಕಾರ ಚಂದ್ರನ ಮೇಲೆ 29° ಉತ್ತರ ಮತ್ತು 62° ಉತ್ತರ ಅಕ್ಷಾಂಶದ ನಡುವೆ ಜಲಸಂಚಯನ, ಒಎಚ್ ಮತ್ತು ಎಚ್2ಒ ಗಳನ್ನು ಈ ಉಪಗ್ರಹ ಸ್ಪಷ್ಟವಾಗಿ ಸೆರೆ ಹಿಡಿದಿದೆ.
ಈ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ್ದು, ಚಂದ್ರನ ಮೇಲೆ ಹೈಡ್ರಾಕ್ಸಿಲ್ ಮತ್ತು ನೀರಿನ ರಚನೆಯನ್ನು ವಿವರಿಸುತ್ತಾ, ಸ್ಪ್ರೆಕ್ಟ್ರಲ್ ವಿಶ್ಲೇಷಣೆಯ ಮೂಲಕ ಹೈಡ್ರೇಶನ್ ವ್ಯಾಖಾನವು ಖನಿಜಶಾಸ್ತ್ರ, ರಾಸಾಯನಿಕ ಸಂಯೋಜನೆ, ಭೂವಿಜ್ಞಾನ, ಭೂ ಭೌತಶಾಸ್ತ್ರಕ್ಕೆ ಸಂಬಂಧಿಸಿದಂತೆ ಒಳಹರಿವುಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಈ ಸಂಶೋಧನೆ ಭವಿಷ್ಯದ ಗ್ರಹಗಳ ಪರಿಶೋಧನೆಗೆ ಸಂಬಂಧಿಸಿದಂತೆ ಪೂರಕವಾಗಿದ್ದು, ಚಂದ್ರನ ಸಂಪನ್ಮೂಲಗಳ ಬಳಕೆಯ ದೃಷ್ಟಿಯಿಂದ ಹಲವು ದೇಶಗಳು ಸಂಶೋಧನಾ ಕ್ಷೇತ್ರದಲ್ಲಿ ನಡೆಸುತ್ತಿರುವ ಪೈಪೋಟಿಗೂ ಅನುಕೂಲ ಒದಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.