ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶದ ಜನಸಂಖ್ಯೆ ಸ್ಥಿರಗೊಳಿಸುವ, ತಾಯಿ ಹಾಗೂ ಶಿಶು ಮರಣವನ್ನು ತಡೆಯಲು ನೀತಿಯೊಂದನ್ನು ಅನಾವರಣ ಮಾಡಿದ್ದಾರೆ. ಇದಕ್ಕೆ ಕಾಲಮಿತಿ ನಿಗದಿ ಮಾಡಿದ್ದಾರೆ. 2021- 2030 ರ ವರೆಗಿನ ಅವಧಿಗೆ ಪೂರಕವಾಗಿ ಈ ಯೋಜನೆ ಅಳವಡಿಸಲಾಗಿದ್ದು, 2026 ರ ವರೆಗೆ 2.1 ಕ್ಕೆ ಮತ್ತು 2030 ರ ವೇಳೆಗೆ 1.9 ಕ್ಕೆ ಇಳಿಕೆ ಮಾಡುವ ಗುರಿಯನ್ನು ಈ ನೀತಿ ಒಳಗೊಂಡಿದೆ.
ಜನಸಂಖ್ಯೆ ನಿಯಂತ್ರಣ ಕರಡು ಮಸೂದೆಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದ ಉತ್ತರ ಪ್ರದೇಶದ ಕಾನೂನು ಆಯೋಗ ಜುಲೈ 19 ರೊಳಗೆ ಇದಕ್ಕೆ ಸಾರ್ವಜನಿಕ ವಲಯದಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಈ ಮಸೂದೆಯಂತೆ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗ, ಸಬ್ಸಿಡಿ ಪಡೆಯುವುದಕ್ಕೂ ಅರ್ಹರಲ್ಲ ಎಂದು ಸರ್ಕಾರ ತಿಳಿಸಿತ್ತು. ಜೊತೆಗೆ ಎರಡು ಮಕ್ಕಳನ್ನು ಹೊಂದುವ ದಂಪತಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸರ್ಕಾರ ಈ ಮಸೂದೆಯಲ್ಲಿ ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.