ನಾಗ್ಪುರ: ದೇಶದ ಮೊದಲ ಖಾಸಗಿ ದ್ರವೀಕೃತ ನೈಸರ್ಗಿಕ ಅನಿಲ ಎಲ್ಎನ್ಜಿ ಘಟಕವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಿದ್ದಾರೆ.
ಅನಂತರ ಮಾತನಾಡಿದ ಅವರು, ಒಟ್ಟಾರೆ ಸಾಗಾಟ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಪೂರಕವಾಗಲಿದೆ. ಜೊತೆಗೆ ಶುದ್ಧ ಹಾಗೂ ವೆಚ್ಚ ಪರಿಣಾಮಕಾರಿ ಅನಿಲವನ್ನು ಇದು ಒದಗಿಸಿ ಕೊಡಲಿದೆ. ಹಾಗೆಯೇ ಹಲವು ಉದ್ಯೋಗಾವಕಾಶ ಸೃಷ್ಟಿಗೂ ಇದು ಪೂರಕವಾಗಿರಲಿದೆ. ಒಟ್ಟಿನಲ್ಲಿ ಸಾರಿಗೆ ವಲಯಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಇದೊಂದು ಕ್ರಾಂತಿಕಾರಿ ನಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಎಥನಾಲ್, ವಿದ್ಯುತ್, ಸಂಕುಚಿತ ನೈಸರ್ಗಿಕ ಅನಿಲ, ದ್ರವೀಕೃತ ನೈಸರ್ಗಿಕ ಅನಿಲ ಮುಂತಾದವುಗಳನ್ನು ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾಗಿ ಬಳಕೆ ಮಾಡಬಹುದು. ಕೃಷಿ ಉತ್ಪನ್ನಗಳ ಜೈವಿಕ ಎಥನಾಲ್ ಪ್ರಯೋಗ ಯಶಸ್ವಿಯಾಗಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
विदर्भ को डीज़ल मुक्त बनाने के @nitin_gadkari जी के सपने की शुरुआत। देश के पहले निजी एलएनजी पंप का लोकार्पण। pic.twitter.com/7gfofzW3hv
— Office Of Nitin Gadkari (@OfficeOfNG) July 11, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.