ಬೆಂಗಳೂರು: ಕರ್ನಾಟಕ ರಾಜ್ಯದ ಕರಾವಳಿ ಸಹಿತ ಕೇರಳದ ಗಡಿ ಭಾಗಗಳ ಅರಣ್ಯ, ಗ್ರಾಮೀಣ ಪ್ರದೇಶಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತಾ ವಿಭಾಗದ ಗಮನಕ್ಕೆ ಬಂದಿದೆ.
ಸ್ಯಾಟಲೈಟ್ ಫೋನ್ಗಳನ್ನು ಉಗ್ರಗಾಮಿ ಚಟುವಟಿಕೆ, ನಕ್ಸಲ್ ಚಟುವಟಿಕೆಗಳು, ಭೂಗತ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತದೆ. ಈ ಫೋನ್ಗಳು ಸದ್ದು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಐಎಸ್ಡಿ ತನಿಖೆ ನಡೆಸಲು ಮುಂದಾಗಿದೆ.
ಪ್ರಸ್ತುತ ಇಡೀ ದೇಶವೇ ಕೊರೋನಾ ಸೋಂಕಿಗೆ ತತ್ತರಿಸಿದೆ. ಈ ಸಂದರ್ಭದಲ್ಲಿ ಇಂತಹ ಅಸಮ ಪರಿಸ್ಥಿತಿಯನ್ನು ಬಳಕೆ ಮಾಡಿ ಉಗ್ರರ, ನಕ್ಸಲ್ ಸಂಘಟನೆಗಳ ಸದಸ್ಯರು ಇಂತಹ ಫೋನ್ಗಳ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕಳೆದ ಆರೇಳು ತಿಂಗಳುಗಳಲ್ಲಿ ರಾಜ್ಯದ 8 – 10 ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ಗಳ ಬಳಕೆ, ನೆರೆ ರಾಜ್ಯ, ವಿದೇಶಗಳಿಗೆ ಕರೆಗಳು ಹೋಗಿರುವುದು ಸಹ ಈ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.