ಬೆಂಗಳೂರು: ನಗರದೊಳಗೆ ಕಟ್ಟಡ ಯೋಜನೆಗಳ ಅನುಮೋದನೆಗೆ ಕಳೆದ ವರ್ಷ ನಿಗದಿ ಮಾಡಲಾಗಿದ್ದ ಶುಲ್ಕವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ.
ಮಾರ್ಗದರ್ಶನ ಮೌಲ್ಯದ ಪ್ರತಿ ಚದರ ಮೀಟರ್ಗೆ 0.5% ದಿಂದ 60% ಗಳಷ್ಟು ಕಡಿತಗೊಳಿಸಿ, ವಸತಿ ಆಸ್ತಿಗಳಿಗೆ 0.2% ಕ್ಕೆ ಇಳಿಕೆ ಮಾಡಿದೆ. ಕೈಗಾರಿಕೆಗಳಿಗೆ 1% ದಿಂದ 0.3% ಕ್ಕೆ ಇಳಿಕೆ ಮಾಡಲಾಗಿದೆ. ಅಭಿವೃದ್ಧಿ ಅಥವಾ ಹೆಚ್ಚುವರಿ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ. ಸರ್ಕಾರದ ಈ ನಿಲುವಿನಿಂದ ಯೋಜನೆ ಅನುಮೋದನೆ ಶುಲ್ಕ ಹೆಚ್ಚಳ ಕಾರಣದಿಂದ ಮನೆಗಳ ನಿರ್ಮಾಣ ಸ್ಥಗಿತಗೊಳಿಸಿರುವ ಮಾಲೀಕರಿಗೆ ಕೊಂಚ ನಿರಾಳತೆ ದೊರೆತಿದೆ.
ಈ ಕ್ರಮ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಉತ್ತೇಜನ ನೀಡುತ್ತದೆ. ಯೋಜನೆ ಅನುಮೋದನೆಯ ವೆಚ್ಚ ಹೆಚ್ಚಿದಲ್ಲಿ ಜನರು ಕೆಲಸ ನಡೆಸಲು ಹಿಂಜರಿಯುತ್ತಾರೆ. ಜೊತೆಗೆ ಅನುಮೋದನೆ ಪಡೆಯದಿರುವುದಕ್ಕೂ ಅದು ಕಾರಣವಾಗುತ್ತದೆ. ಆದ್ದರಿಂದ ಈ ಶುಲ್ಕ ಕಡಿತ ಕ್ರಮ ಹೆಚ್ಚಿನ ನಿರ್ಮಾಣ ಕಾರ್ಯಗಳು ನಡೆಯಲು ಅನುಕೂಲ ಒದಗಿಸಲಿದೆ ಎಂದು ಬಿಬಿಎಂಪಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.