ಮೈಸೂರು: ಕೊರೋನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ವಿಚಾರದಲ್ಲೂ ಸಾಕಷ್ಟು ಏರಿಳಿತಗಳು ಕಂಡುಬಂದಿದೆ. ಲಾಕ್ಡೌನ್ನಿಂದಾಗಿದೆ ತರಗತಿಗಳ ಕೋಣೆಗಳ ಹೊರತಾಗಿ ಆನ್ಲೈನ್ ಶಿಕ್ಷಣವೂ ಪ್ರಾರಂಭವಾಗಿದೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಆನ್ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳುವುದು ಸಾಧ್ಯವಿಲ್ಲದ ಕಾರಣ, ಮನೆಯಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ಸಂದರ್ಭದಲ್ಲಿ ಮೈಸೂರಿನ ಶೇಶಾದ್ರಿಪುರಂ ಪದವಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕ ಡಾ ಆರ್ ರಾಘವೇಂದ್ರ ಅವರು ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಇತರರಿಗೆ ಮಾದರಿಯಾಗುವ ಚಟುವಟಿಕೆಯೊಂದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.
39 ವರ್ಷದ ರಾಘವೇಂದ್ರ ಅವರು ಹಳೆ ಮೈಸೂರು ಭಾಗದ ಹಲವು ಕೊರೋನಾ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತರಿಗೆ ಉಚಿತ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸುವ ಮೂಲಕ ಅವರಲ್ಲಿ ಮನೋ ಚೈತನ್ಯ, ದೈಹಿಕ ಸದೃಢತೆ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಯ 3 ಸಾವಿರಕ್ಕೂ ಹೆಚ್ಚಿನ ಕೊರೋನಾ ಸೋಂಕಿತರಿಗೆ ಯೋಗ ಕಲಿಸಿದ್ದಾರೆ. ಹಾಗೆಯೇ ಅವರು ಸೋಂಕಿನಿಂದ ಗುಣಮುಖರಾಗುವ ನಿಟ್ಟಿನಲ್ಲಿಯೂ ರಾಘವೇಂದ್ರ ಅವರು ಯೋಗದ ಮೂಲಕವೇ ಪ್ರಯತ್ನ ನಡೆಸುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.
ಇವರು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲು ಗ್ರಾಮದವರು. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳದೆ, ತಾವು ಕಲಿತ ವಿದ್ಯೆಯನ್ನು ಮತ್ತಷ್ಟು ಜನರಿಗೆ ಕಲಿಸುವ ಮೂಲಕ ಹೀಗೂ ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ. ಅದರಲ್ಲೂ ಕೊರೋನಾ ಸೋಂಕಿತರಿಗೆ ಯೋಗ, ಪ್ರಾಣಾಯಾಮಗಳನ್ನು ಹೇಳಿಕೊಡುವ ಮೂಲಕ ಅವರ ಶೀಘ್ರ ಚೇತರಿಕೆಗೂ ಸೇವೆ ಸಲ್ಲಿಸಿದ್ದಾರೆ. ಕೊರೋನಾ ರೋಗಿಗಳ ಮಾನಸಿಕ ಶಕ್ತಿ, ದೈಹಿಕ ಸ್ಥಿರತೆ ಹೆಚ್ಚಿಸಲು ಪೂರಕವಾದ ವ್ಯಾಯಾಮಗಳನ್ನು ಸೋಂಕಿತರಿಗೆ ಕಲಿಸಿಕೊಡುವ ಮೂಲಕ ತಮ್ಮ ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ಪರಿಪೂರ್ಣವಾಗಿ ಕಳೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.