ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ದೀರ್ಘ ಸಮಯದಿಂದ ಉಳಿಸಿಕೊಂಡಿರುವ ಪ್ರೀಮಿಯಂ ಫ್ರೋರ್ ಆಫ್ ರೇಷಿಯೋ (ಫಾರ್) ಪ್ರಸ್ತಾವನೆ ಜಾರಿಗೆ ತರಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ.
ನಗರಾಭಿವೃದ್ದಿ ಇಲಾಖೆ ಈ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ. ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಈ ನಿಯಮ ಜಾರಿಗೆ ಬರಬಹುದಾಗಿದೆ. ಯೋಜನಾ ಪ್ರಾಧಿಕಾರಗಳು ವಲಯ ನಿಯಮಗಳನ್ನು ತಿದ್ದುಪಡಿ ಮಾಡಿ ,ಅದರ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಜಾರಿ ಪ್ರಕ್ರಿಯೆಗಳು ನಡೆಯಲಿವೆ. ಅಂತಿಮ ಆದೇಶಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಹ ಪಡೆಯಲಾಗುವುದು ಎಂದು ನಗರಾಭಿವೃದ್ದಿ ಇಲಾಖೆ ತಿಳಿಸಿದೆ.
ಅಧಿಸೂಚನೆಗೆ ಅನುಗುಣವಾಗಿ ಸಾಮಾನ್ಯ ಅನುಮತಿಸುವ ಎಫ್ಎಆರ್ 0.6 ಪಟ್ಟು ಮೀರದಂತೆ ಪ್ರೀಮಿಯಂ ಎಫ್ಎಆರ್ ಅನ್ನು ಕಟ್ಟಢದ ಸ್ಥಳದಲ್ಲಿ ರಸ್ತೆ ಅಗಲವನ್ನು 9 ಮೀ. ಕಡಿಮೆಯಿಲ್ಲದಂತೆ ಅನುಮತಿ ನೀಡಲಾಗುತ್ತದೆ. ಎಫ್ಎಆರ್ ಶುಲ್ಕ ಹೆಚ್ಚುವರಿ ಸಿಟಲ್ ಪ್ರದೇಶದ ಮಾರ್ಗದರ್ಶನದ ಮೌಲ್ಯದ 50% ಗಿಂತ ಕಡಿಮೆ ಇರಬಾರದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.