ಬೆಂಗಳೂರು: ಕೊರೋನಾ ವೈರಸ್ ಸೋಂಕು ತಗುಲದಂತೆ ರಕ್ಷಣೆ ನೀಡುವ ‘ಕೋವಿರಕ್ಷಾ’ ಎಂಬ ಹೆಸರಿನ ಮುಲಾಮನ್ನು ಬೆಂಗಳೂರಿನ ನೂತನ್ ಲ್ಯಾಬ್ ಅಭಿವೃದ್ಧಿ ಮಾಡಿದ್ದು, ಇದರ ಬಳಕೆಗೆ ರಾಜ್ಯ ಆಯುಷ್ ಇಲಾಖೆ ಅನುಮೋದನೆ ನೀಡಿದೆ.
ಈ ಮುಲಾಮನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ನೂತನ್ ಎಚ್ ಎಸ್ ಎಂಬ ಯುವಕ ಆವಿಷ್ಕಾರ ಮಾಡಿದ್ದಾರೆ. ಜೊತೆಗೆ ಈಗಾಗಲೇ ಐಐಎಸ್ಸಿಯ ಸಹಕಾರದ ಜೊತೆಗೆ ನ್ಯಾನೋ ಟೆಕ್ನಾಲಜಿ ಆಧಾರಿತ ನೂತನ್ ಲ್ಯಾಬ್ಸ್ ಎಂಬ ಸ್ಟಾರ್ಟ್ಅಪ್ ಪ್ರಾರಂಭ ಮಾಡಿದ್ದಾರೆ. ಅದರ ಮುಖೇನ ಹೊರಾಂಗಣ ವಾಯು ಶುದ್ಧೀಕರಣಕ್ಕೆ ಅನುಕೂಲವಾಗುವ ಸ್ಮಾಗ್ ಟವರ್, ಒಳಾಂಗಣ ವಾಯು ಶುದ್ಧೀಕರಣ, ವೈರಸ್ ಶುದ್ಧೀಕರಣ ಘಟಕವನ್ನು ಆರಂಭಿಸಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಕೋವಿರಕ್ಷಾವನ್ನು ಐಐಎಸ್ಸಿ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಇದನ್ನು ಮೂಗು, ಗಂಟಲು, ಮಾಸ್ಕ್ಗಳಿಗೆ ಹಚ್ಚಿಕೊಳ್ಳುವ ಮೂಲಕ ವೈರಸ್ ತಗುಲದಂತೆ ಎಚ್ಚರ ವಹಿಸಬಹುದಾಗಿದೆ. ಇದನ್ನು ಒಮ್ಮೆ ಹಚ್ಚಿಕೊಂಡರೆ ಸತತ ಮೂರು ಗಂಟೆಗಳ ಕಾಲ ಇದು ವೈರಸ್ನಿಂದ ರಕ್ಷಣೆ ಒದಗಿಸುತ್ತದೆ.
ಈ ಮುಲಾಮನ್ನು ಬೆಳ್ಳಿಯನ್ನು ಪ್ರಧಾನವಾಗಿರಿಸಿಕೊಂಡು ನೈಸರ್ಗಿಕ ಮತ್ತು ನ್ಯಾನೋ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಪ್ರತಿಯೊಬ್ಬರೂ ಈ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಸೋಂಕು ತಗುಲಿಸುವ ವೈರಾಣುಗಳಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ನೂತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮುಲಾಮನ್ನು ಕಳೆದ ಒಂದು ತಿಂಗಳಲ್ಲಿ 10 ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗಿಸಲಾಗಿದೆ. ಇದಕ್ಕೆ ಉತ್ತಮ ಫಲಿತಾಂಶ ಸಹ ದೊರೆತಿದೆ. ಮಕ್ಕಳಿಗೂ ಇದನ್ನು ಬಳಕೆ ಮಾಡಬಹುದು. ಇದರ ಒಂದು ವಯಲ್ ಅನ್ನು 200 ಕ್ಕೂ ಅಧಿಕ ಬಾರಿ ಬಳಕೆ ಮಾಡಬಹುದು. ಇದರ ಅನುಮೋದನೆಗಾಗಿ ಕೇಂದ್ರ ಆಯುಷ್ ಸಚಿವಾಲಯಕ್ಕೆ ಸಹ ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ನೂತನ್ ಹೇಳಿದ್ದಾರೆ.
ಕೋವಿರಕ್ಷಾ ಕುರಿತಂತೆ ಆರ್ಎಸ್ಎಸ್ನ ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಮಾತನಾಡಿದ್ದು, ಕೊರೋನಾ ಸಂಕಷ್ಟ ಭಾರತದ ಅಂತಃಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ನೆರವಾಗಿದೆ. ವಿಜ್ಞಾನಿಗಳು, ಜನಸಾಮಾನ್ಯರು ಕಾಲಕ್ಕೆ ತಕ್ಕಂತೆ ಸಂಶೋಧನೆ ನಡೆಸುತ್ತಾ ಬಂದಿದ್ದಾರೆ. ಕೋವಿರಕ್ಷಾ ಮೂಲಕ ನೂತನ್ ಲ್ಯಾಬ್ ಈ ಪರಂಪರೆ ಮುಂದುವರಿಸಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.