ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸದ್ಯದಲ್ಲೇ ಆರಂಭ ಮಾಡಲಿರುವ ಮೂರು ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಕೋರ್ಸ್ಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಬಳಕೆ ಮಾಡುವ ವಿವಿಧ ವಿಚಾರಗಳನ್ನು ನೇರವಾಗಿ ವಿಜ್ಞಾನಿಗಳಿಂದಲೇ ಕಲಿಯಲು ಅವಕಾಶ ನೀಡಲಾಗಿದೆ. ಇದರಲ್ಲಿ ಮೆಶಿನ್ ಲರ್ನಿಂಗ್, ಅರ್ತ್ ಅಬ್ಸರ್ವೇಶನ್ ಫಾರ್ ಕಾರ್ಬನ್ ಸೈಕಲ್ ಮತ್ತು ವೆಬ್ ಜಿಐಎಸ್ ತಂತ್ರಜ್ಞಾನಗಳೆಂಬ ಮೂರು ವಿಷಯಗಳ ಬಗ್ಗೆ ಇಸ್ರೋ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಂಡಿದೆ.
ಈ ಕೋರ್ಸ್ಗಳಿಗೆ ಯಾವುದೇ ಶುಲ್ಕವಿಲ್ಲ. ಆನ್ಲೈನ್ ಮುಖೇನ ತರಗತಿಗಳು ನಡೆಯಲಿದೆ. 4 ರಿಂದ 12 ದಿನಗಳ ವರೆಗೆ ಈ ಕೋರ್ಸ್ನ ಅವಧಿಯನ್ನು ಇಸ್ರೋ ನಿಗದಿ ಮಾಡಿದೆ. ಕೋರ್ಸ್ ಮುಗಿದ ಬಳಿಕ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತದೆ. ಕೋರ್ಸ್ಗಳ ಲಭ್ಯತೆ ಜೂ. 21 ರಿಂದ ಜುಲೈ 5-9 ಎಂದು ಸಂಸ್ಥೆ ತಿಳಿಸಿದೆ.
ಪದವಿಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ಅರ್ಜಿಯ ಮೇಲೆ ತಮ್ಮ ಕಾಲೇಜು ಅಥವಾ ವಿವಿಯ ಮುಖ್ಯಸ್ಥರಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಇಸ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.