ಬೆಂಗಳೂರು: ಇಹಲೋಕ ತ್ಯಜಿಸಿದ ದಲಿತ ಕವಿ, ಬಂಡಾಯ ಸಾಹಿತಿ ಡಾ ಸಿದ್ಧಲಿಂಗಯ್ಯ ಅವರ ಸ್ಮರಣಾರ್ಥ ಸರ್ಕಾರ ಅಧ್ಯಯನ ಕೇಂದ್ರವೊಂದನ್ನು ಸ್ಥಾಪಿಸಲಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದ ಮೂಲಕವೈ ದೀನದಲಿತರ ದನಿಯಾಗಿ ಸಿದ್ಧಲಿಂಗಯ್ಯ ಅವರು ಕಾರ್ಯನಿರ್ವಹಿಸುತ್ತಿದ್ದವರು. ಅವರು ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಹ ಸದನದಲ್ಲಿ ಹಲವು ವಿಚಾರಗಳ ಸಂಬಂಧ ಬೆಳಕು ಚೆಲ್ಲಿದ್ದರು. ಅವರು ಇಹಲೋಕ ತ್ಯಜಿಸಿರುವುದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಅವರು ಅಜಾತಶತ್ರು. ಅವರನ್ನು ಇಷ್ಟಪಡದವರ ಸಂಖ್ಯೆ ವಿರಳಾತಿ ವಿರಳ. ಸಮಾಜಮುಖಿ ಕವಿಯಾಗಿದ್ದ ಅವರು ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿದ್ದವರು. ಅವರ ಚಿಂತನೆ, ನೆನಪು ಸಮಾಜದಲ್ಲಿ ಬಹುಕಾಲ ಉಳಿಯಬೇಕು. ಅವರ ಸಾಹಿತ್ಯ ಕೃಷಿಯ ಬಗ್ಗೆ ಅರಿವು ಮೂಡಲು ಒಂದು ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಅವರ ಕುಟುಂಬದ ಜೊತೆಗೂ ಮಾತನಾಡಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.