ಬೆಂಗಳೂರು: ಕೊರೋನಾ ಮತ್ತು ಅದರ ದುರಂತದ ಬಗ್ಗೆ ತಪ್ಪು ಮಾಹಿತಿ ವಿರುದ್ಧ ಹೋರಾಡುವ ಸಲುವಾಗಿ, ಅದರಿಂದಾದ ತೊಂದರೆ, ಸಾವು, ನೋವುಗಳನ್ನು ಎದುರಿಸಲು ಮುಂಚೂಣಿ ವೈದ್ಯರು ಮತ್ತು ಭಾರತದಿಂದ ವಲಸೆ ಹೋಗಿ ನೆಲೆಸಿರುವ ವಿಜ್ಞಾನಿಗಳು ಸಾಕ್ಷ್ಯ ಆಧಾರಿತ ಕೊರೋನಾ ಆರೈಕೆ ತಂತ್ರಜ್ಞಾನ ಅಭಿವೃದ್ಧಿ ಮಾಡಿದ್ದಾರೆ.
ಇತ್ತೀಚೆಗೆ ಆರಂಭಿಸಲಾದ ಸ್ವಾಸ್ಥ್ ಕಮ್ಯುನಿಟಿ ಸೈನ್ಸ್ ಅಲಯನ್ಸ್, ಪಾಲುದಾರಿಕೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಳಸಲು ಸಮಯೋಚಿತ ಕ್ಲಿನಿಕಲ್ ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಎಲ್ಲವುಗಳೂ ವೈಜ್ಞಾನಿಕ ನಿಖರತೆಯನ್ನು ಪರಿಶೀಲಿಸಲ್ಪಟ್ಟಿದೆ. ಇದು ಆರೋಗ್ಯ ಕಾರ್ಯಕರ್ತರು, ವ್ಯವಸ್ಥಾಪಕರು ಮತ್ತು ರೋಗಿಗಳಿಗಾಗಿ ಹೋಂ ಕೇರ್ ಕಿಟ್ಗಳನ್ನು ಮತ್ತು ಆರೋಗ್ಯ ಕಾರ್ಯಕರ್ತರು, ವ್ಯವಸ್ಥಾಪಕರು ಮತ್ತು ರೋಗಿಗಳಿಗೆ ಮತ್ತೊಂದು ಕೊರೋನಾ ಆರೈಕೆ ಕೇಂದ್ರ ಕಿಟ್(ಆಮ್ಲಜನಕ ಅಗತ್ಯವಿರುವಲ್ಲಿ) ಅನ್ನು ಸಹ ಅಭಿವೃದ್ಧಿ ಮಾಡಿದೆ. ಯೂಟ್ಯೂಬ್, ವಿಡಿಯೋ, ವೆಬ್ಸೈಟ್ ಮತ್ತು ಪಿಡಿಎಫ್ ಮೂಲಕ ಇದರ ಮಾಹಿತಿ ನೀಡಲು ಸಾಧ್ಯವಿಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಈ ತಂತ್ರಜ್ಞಾನದ ಮೂಲಕ ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಿಮೆ ರೋಗ ಲಕ್ಷಣಗಳಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ತರಬೇತಿ ನೀಡಲಾಗುತ್ತದೆ. ಯಾವ ಔಷಧ ನೀಡಬೇಕು, ಯಾವುದನ್ನು ಶಿಫಾರಸ್ಸು ಮಾಡಬಾರದು ಎಂಬುದರ ಬಗೆಗೂ ತರಬೇತಿ ನೀಡಲಾಗುತ್ತದೆ. ಇದರಿಂದ ಚಿಕಿತ್ಸಾ ನಂತರದ ಸೈಡ್ ಎಫೆಕ್ಟ್ಗಳನ್ನು ತಪ್ಪಿಸಲು ಸಾಧ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೊರೋನಾ ಕೇರ್ ಸೆಂಟರ್ಗಳಲ್ಲಿ ವೈದ್ಯರು ಮತ್ತು ದಾದಿಯರಿಗೆ ಆಮ್ಲಜನಕ ಕಾನ್ಸನ್ಟ್ರೇಟರ್ಗಳನ್ನು ಎಷ್ಟು ನೀಡಬೇಕು, ರೋಗಿಗಳನ್ನು ತೃತೀಯ ಆರೈಕೆ ಕೇಂದ್ರಗಳಿಗೆ ಶಿಫಾರಸು ಮಾಡುವುದು ಇತ್ಯಾದಿಗಳನ್ನು ಸಹ ಈ ತರಬೇತಿ ಒಳಗೊಂಡಿದೆ. ರೋಗಿಗಳಿಗೆ ಆಕ್ಸಿಮೀಟರ್ಗಳನ್ನು, ಥರ್ಮಾಮೀಟರ್ಗಳನ್ನು ಬಳಸುವುದಕ್ಕೂ ತರಬೇತಿಯನ್ನು ಇದರ ಮೂಲಕ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.