ಬೆಂಗಳೂರು: ಭಾರತದ ಪ್ರಮುಖ ನಗರಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರಿನ ವ್ಯಾಕ್ಸಿನೇಷನ್ ವ್ಯಾಪ್ತಿ ಅಧಿಕವಾಗಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಈ ವರೆಗೆ 28.3 ಲಕ್ಷಕ್ಕೂ ಅಧಿಕ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯ 28.6% ಜನರಿಗೆ ಸರ್ಕಾರ ಕೊರೋನಾ ಲಸಿಕೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಈ ನಡುವೆ ಕೊರೋನಾ ಲಸಿಕೆ ಒದಗಿಸುವಂತೆ ಜಾಗತಿಕ ಟೆಂಡರ್ ಕರೆಯಲಾಗಿದ್ದರೂ, ಇದಕ್ಕೆ ಮುಂದೆ ಬಂದಿದ್ದ 2 ಸಂಸ್ಥೆಗಳು ಅಗತ್ಯ ದಾಖಲೆ ಒದಗಿಸದ ಕಾರಣ ಸರ್ಕಾರ ಟೆಂಡರ್ ಸ್ಥಗಿತಗೊಳಿಸಿ, ಔಷಧ ತಯಾರಕ ಸಂಸ್ಥೆಗಳಿಂದಲೇ ನೇರ ಖರೀದಿಗೆ ಮುಂದಾಗಿದೆ ಎಂದು ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ರಾಜ್ಯಕ್ಕೆ 58.71 ಲಕ್ಷಕ್ಕೂ ಅಧಿಕ ಲಸಿಕೆ ಪೂರೈಸಲಾಗುವುದು. ಕೇಂದ್ರ ಸರ್ಕಾರ 45 ಲಕ್ಷ ಪೂರೈಸಲಿದ್ದು, ರಾಜ್ಯ ಸರ್ಕಾರ 13.7 ಲಕ್ಷ ಲಸಿಕೆ ಖರೀದಿಸಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.