ಬೀದರ್: ನಗರದಲ್ಲಿ RSS, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಿದೆ. ಈ ಸೆಂಟರ್ನಲ್ಲಿ ಕೇವಲ 1 ರೂ. ಗೆ ಸಂಪೂರ್ಣ ಚಿಕಿತ್ಸೆ, ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಇದು ಸಮಾಜದ ಸಮಾನ್ಯ ಜನರ ಪಾಲಿಗೆ ಆಶಾಕಿರಣವಾಗಿದೆ.
ಈ ಕೇಂದ್ರವನ್ನು ಆರ್ಎಸ್ಎಸ್ ಸಂಚಾಲಿತ ಕೇಶವ ಕಾರ್ಯ ಸಂವರ್ಧನ ಸಮಿತಿ, ಡಾ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ, ವಂದೇ ಮಾತರಂ ಇಂಟರ್ ನ್ಯಾಷನಲ್ ಸ್ಕೂಲ್, ಸರಸ್ವತಿ ವಿದ್ಯಾನಿಕೇತನ ಎಜುಕೇಶನ್ ಚಾರಿಟೆಬಲ್ ಟ್ರಸ್ಟ್ ಗಳು ಆರಂಭಿಸಿವೆ. ಇಲ್ಲಿ ಕೇವಲ 1 ರೂ. ಗೆ ಚಿಕಿತ್ಸೆ, ಊಟ, ಉಪಹಾರ, ಔಷಧ, ಆಕ್ಸಿಜನ್, ಆಂಬ್ಯುಲೆನ್ಸ್ ಮೊದಲಾದ ವ್ಯವಸ್ಥೆಗಳುವ ಲಭ್ಯವಿದ್ದು, ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಬಡ ಕೊರೋನಾ ಸೋಂಕಿತರಿಗೆ ಸಂಜೀವಿನಿಯಾಗಿದೆ.
50 ಹಾಸಿಗೆಗಳ ವೈದ್ಯಕೀಯ ಸೌಲಭ್ಯದ ಜೊತೆಗೆ ವಂದೇ ಮಾತರಂ ಶಾಲೆಯನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಇಲ್ಲಿ ಸೋಂಕಿತರಿಗೆ 24*7 ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳಿಗೆ ಬೆಳಗ್ಗೆ ಕಷಾಯ, ಉಪಹಾರ, ಮಧ್ಯಾಹ್ನ ಪೌಷ್ಟಿಕ ಊಟ, ಸಂಜೆ ಲಘು ಉಪಹಾರ, ರಾತ್ರಿ ಊಟ, ಶುದ್ಧ ಬಿಸಿ ನೀರು, ತಣ್ಣೀರಿನ ವ್ಯವಸ್ಥೆ ಸಹ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಬಳಕೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳ ವ್ಯವಸ್ಥೆ ಸಹ ಇದೆ. ಹಾಗೆಯೇ ಸೋಂಕು ಉಲ್ಬಣವಾದರೆ ಅವರನ್ನು ವಾಲಿಶ್ರೀ, ಬಿಮ್ಸ್ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಸಹ ಇದೆ.
ದಿನಕ್ಕೆ ಮೂರು ಬಾರಿ ಸೋಂಕಿತರ ಆರೋಗ್ಯ ತಪಾಸಣೆ, ಸಮಾಲೋಚನೆ, ಯೋಗ, ಪ್ರಾಣಾಯಾಮ, ಸೋಂಕಿತರ ಅಧ್ಯಯನ ದೃಷ್ಟಿಯಿಂದ ರಾಷ್ಟ್ರೀಯ ಸಾಹಿತ್ಯವನ್ನು ಒದಗಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.