ಬೆಂಗಳೂರು: ನೇರ ನಗದು ವರ್ಗಾವಣೆಯಲ್ಲಿ ರಾಜ್ಯದ ಕೃಷಿ ವಲಯ ಮೂರು ವರ್ಷಗಳಲ್ಲಿ ರೂ.10 ಸಾವಿರ ಕೋಟಿ ವರ್ಗಾವಣೆ ಮಾಡಿರುವುದಾಗಿ ಇ ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದ್ದಾರೆ.
2018-19 ರಿಂದ ಡಿಟಿಬಿ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪಿಎಂ ಕಿಸಾನ್, ಬೆಂಬಲ ಬೆಲೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ವಿತರಣೆ, ಕೊರೋನಾ ಪ್ಯಾಕೇಜ್ ಅಡಿಯಲ್ಲಿ ಪರಿಹಾರ ಮತ್ತು ಫಲಾನುಭವಿ ಆಧರಿಸಿ ನೆರವು ವರ್ಗಾವಣೆ ಮೊದಲಾದವುಗಳನ್ನು ರಾಜ್ಯದಲ್ಲಿ ಡಿಟಿಬಿ ಮುಖಾಂತರವೇ ನಡೆಸಲಾಗುತ್ತಿದೆ ಎಂದು ಚಾವ್ಲಾ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಡಿಟಿಬಿ ಮುಖೇನ 5 ಕೋಟಿ ವಹಿವಾಟು ನಡೆದಿದ್ದು, 13200 ಕೋಟಿ ವರ್ಗಾವಣೆ ಮಾಡಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನಾ ವಲಯಗಳ 37 ಯೋಜನೆಗಳನ್ನು ಇದರ ಮೂಲಕವೇ ನಡೆಸಲಾಗುತ್ತಿದೆ. ಮೂರು ವರ್ಷಗಳಲ್ಲಿ 3. 20 ಕೋಟಿ ವಹಿವಾಟು ನಡೆಸಲಾಗಿದ್ದು, 10 ಸಾವಿರ ಕೋಟಿ ನೆರವನ್ನು ಕೃಷಿ ಕ್ಷೇತ್ರಕ್ಕೆ ವವರ್ಗಾಯಿಸಲಾಗಿದ್ದು, ಇದು ಸಾಧನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸೇವೆಯ ಅನುಷ್ಠಾನವನ್ನು FRUITS ಪೋರ್ಟಲ್ನ ರೈತರ ಗುರುತಿನ ಮಾಹಿತಿಗೆ ಬಳಕೆ ಮಾಡಲಾಗುತ್ತದೆ. ಸಂಪೂರ್ಣ ಆಧಾರ್ ಗುರುತಿನ ಸಂಖ್ಯೆಯ ಮೂಲಕವೇ ಪಾವತಿ ನಡೆಯುತ್ತಿದ್ದು, ಅಕ್ರಮಗಳು ನಡೆಯುವುದನ್ನು ತಡೆಯುವುದಕ್ಕೂ ಇದು ಪೂರಕವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.