ಕಲ್ಬುರ್ಗಿ: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕೊರೋನಾ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ತತ್ತರಿಸಿದ್ದಾರೆ. ಆದರೆ ಕಲ್ಬುರ್ಗಿ ಜಿಲ್ಲೆಗೆ ಸಂಬಂಧಿಸಿದಂತೆ 634 ಹಳ್ಳಿಗಳಲ್ಲಿ ಈ ವರೆಗೆ ಒಂದು ಕೊರೋನಾ ಸೋಂಕಿನ ಪ್ರಕರಣವೂ ದಾಖಲಾಗಿಲ್ಲವಾಗಿದ್ದು, ಈ ಹಳ್ಳಿಗಳು ಶೂನ್ಯ ಕೊರೋನಾ ಹಳ್ಳಿಗಳೆಂಬ ಕೀರ್ತಿಗೆ ಭಾಜನವಾಗಿವೆ.
ಈ ಸಂಬಂಧ ಮಾತನಾಡಿರುವ ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ, ಸದ್ಯ ಕಲ್ಬುರ್ಗಿಯ 634 ಹಳ್ಳಿಗಳು ಕೊರೋನಾ ಮುಕ್ತವಾಗಿವೆ. ಆದರೆ ಮುಂದಿನ ದಿನಗಳಲ್ಲಿ ಕೊರೋನಾ ಬರುವುದಿಲ್ಲ ಎಂದು ಹೇಳುವುದು ಅಸಾಧ್ಯ. ಹಾಗಾಗಿ ಸರ್ಕಾರ ಸೂಚಿಸಿದ ಎಲ್ಲಾ ನಿಯಂತ್ರಣ ಮಾನದಂಡಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜೊತೆಗೆ ಅನಗತ್ಯ ತಿರುಗಾಟ ನಡೆಸಬಾರದು ಎಂದು ಹೇಳಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಕೊರೋನಾ ಮುಂದೆಯೂ ಬಾಧಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಂಕಿತರ ಪರೀಕ್ಷೆ ಸಹ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರ್ಯಾಪಿಡ್ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಕೊರೋನಾ ಜನಜಾಗೃತಿ ಮೂಡಿಸುವ ಮೂಲಕ ಕೊರೋನಾ ನಿಯಂತ್ರಣ ಮಾಡಲಾಗಿದೆ. ಮುಂದೆಯೂ ಇದೇ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಕೊರೋನಾ ಬಾರದಂತೆ ಎಚ್ಚರ ವಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.