ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಂದಿನ ವಾರದಿಂದ ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಅಧ್ಯಯನವನ್ನು ಪ್ರಾರಂಭಿಸಲಿದೆ.
ದೇಶದಲ್ಲಿ ಈ ಲಸಿಕೆಗಳನ್ನು ನೀಡಲು ಪ್ರಾರಂಭಿಸಿದ ನಂತರ ಅದರ ಪರಿಣಾಮಕಾರಿತ್ವದ ಬಗ್ಗೆ ನಡೆಯುತ್ತಿರುವ ಮೊದಲ ಅಧ್ಯಯನ ಇದಾಗಿದೆ. ವರದಿಯ ಪ್ರಕಾರ, ಕೋವಿಡ್-19 ಅನ್ನು ತೀವ್ರ ಸ್ವರೂಪದಲ್ಲಿ ತಡೆಗಟ್ಟುವಲ್ಲಿನ ಪರಿಣಾಮಕಾರಿತ್ವವನ್ನು ಈ ಅಧ್ಯಯನವು ಪರಿಶೀಲಿಸಲಿದೆ.
ಚೆನ್ನೈನ ಐಸಿಎಂಆರ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ಎನ್ಐಇ) ಯ ಹಿರಿಯ ವಿಜ್ಞಾನಿ ಡಾ.ತರುಣ್ ಭಟ್ನಾಗರ್ ಅವರ ಪ್ರಕಾರ, ಈ ಎರಡು ಲಸಿಕೆಗಳ ಒಂದು ಅಥವಾ ಎರಡೂ ಡೋಸ್ ಅನ್ನು ತೆಗೆದುಕೊಂಡ 45 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 4,000 ಜನರನ್ನು ಪರಿಶೀಲಿಸಲಾಗುತ್ತದೆ.
“ಅಧ್ಯಯನದ ಒಂದು ಭಾಗವಾಗಿ ನಾವು ಕೋವಿಡ್-19 ಪಾಸಿಟಿವ್ ಮತ್ತು ಆಸ್ಪತ್ರೆಗೆ ದಾಖಲಾದ ಜನರನ್ನು ಪರಿಶೀಲಿಸುತ್ತವೆ ಮತ್ತು ಅವರ ವ್ಯಾಕ್ಸಿನೇಷನ್ ಸ್ಥಿತಿಯನ್ನು ಕೋವಿಡ್ ನೆಗೆಟಿವ್ ಬಂದವರೊಂದಿಗೆ ಹೋಲಿಸುತ್ತೇವೆ. ರೋಗದ ಪ್ರಗತಿಯನ್ನು ತೀವ್ರವಾಗಿ ತಡೆಗಟ್ಟುವಲ್ಲಿ ವ್ಯಾಕ್ಸಿನೇಷನ್ ಎಷ್ಟು ಪರಿಣಾಮಕಾರಿ ಎಂದು ನಿರ್ಣಯಿಸುವುದು ಇದರ ಉದ್ದೇಶವಾಗಿದೆ ” ಎಂದು ಭಟ್ನಾಗರ್ ತಿಳಿಸಿದ್ದಾರೆ.
ದೇಶದಲ್ಲಿ ನೀಡಲಾದ ಒಟ್ಟು ಲಸಿಕೆ ಸಂಖ್ಯೆ ಇದುವರೆಗೆ 20 ಕೋಟಿಯನ್ನು ದಾಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.