ಯಲ್ಲಾಪುರ: ಗರ್ಭಿಣಿಯರ ಆರೋಗ್ಯ, ಸುಲಲಿತ ಹೆರಿಗೆ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕು ಆಸ್ಪತ್ರೆಯನ್ನು ಸೌರವಿದ್ಯುತ್ ಹೆರಿಗೆ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ.
ರಾಜ್ಯದಲ್ಲೇ ಪ್ರಥಮ ಪ್ರಯತ್ನವಾಗಿದ್ದು, ಸೋಲಾರ್ ವ್ಯವಸ್ಥೆಯಿಂದಾಗಿ ವಿದ್ಯುತ್ ಸಮಸ್ಯೆಯಿಲ್ಲದೆ, ವೈದ್ಯರು ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಸೌರಶಕ್ತಿಯಿಂದಾಗಿ ಹೆರಿಗೆ ವೇಳೆ ಬಳಸುವ ಫ್ರಿಡ್ಜ್, ವ್ಯಾಕ್ಯೂಮ್ ಡೆಲಿವರಿ ಉಪಕರಣ, ರೇಡಿಯಂಟ್, ವಾರ್ಮರ್ ಇತ್ಯಾದಿ ಉಪಕರಣಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತವೆ. ಇದರಿಂದ ರಕ್ತ ಮತ್ತು ಔಷಧ ಸಂಗ್ರಹ, ಅಗತ್ಯ ಬೆಳಕು, ಬಿಸಿ ನೀರು ಬಳಕೆಗೆ ಅನುಕೂಲವಾಗಲಿದೆ. ಅಲ್ಲದೆ ನಿರಾತಂಕವಾಗಿ ಹೆರಿಗೆ ಮಾಡಲು ವೈದ್ಯರಿಗೆ ನೆರವಾಗಲಿದ್ದು,
ಹೆರಿಗೆ ವೇಳೆ ಉಂಟಾಗುವ ಅಪಾಯ ತಡೆಗಟ್ಟಲು ಸಹಾಯವಾಗಲಿದೆ.
ಸೆಲ್ಕೋ ಸೋಲಾರ್ ಕಂಪನಿಯ ವ್ಯವಸ್ಥಾಪಕ ಮಂಜುನಾಥ್ ಭಾಗ್ವತ್, ಆಸ್ಪತ್ರೆಯ ಸೋಲಾರ್ ಘಟಕಕ್ಕೆ ಒಟ್ಟು 31 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಸೆಲ್ಕೋ ಫೌಂಡೇಶನ್ ವತಿಯಿಂದ 25 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಈ ವ್ಯವಸ್ಥೆಯ ಅನುಕೂಲ ಪಡೆದುಕೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.