ಬೆಂಗಳೂರು: ಕೊರೋನಾ ಸೋಂಕಿತರಿಗೆ ಹಾಸಿಗೆ ಹಂಚಿಕೆ, ಡಿಸ್ಚಾರ್ಜ್, ವಲಯವಾರು ರೋಗಿಗಳ ನೋಂದಣಿ ಮೊದಲಾದವುಗಳಿಗೆ ಸಂಬಂಧಿಸಿದಂತೆ ರಿಯಲ್ ಟೈಮ್ ಡ್ಯಾಶ್ಬೋರ್ಡ್ ಅನ್ನು ಬಿಬಿಎಂಪಿ ನಿನ್ನೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ.
ಈ ಸಂಬಂಧ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಈ ಡ್ಯಾಶ್ಬೋರ್ಡ್ ಹಾಸಿಗೆ ಹಂಚಿಕೆಗಳ ವಿಚಾರದಲ್ಲಿ ಮತ್ತಷ್ಟು ಪಾರದರ್ಶಕತೆ ಕಾಣುವಲ್ಲಿ ಸಹಕರಿಸಲಿದೆ. ಸಾರ್ವಜನಿಕರು http://apps.bbmpgov.in/covid19/index.html ವೆಬ್ಸೈಟ್ ಮೂಲಕ ಈ ಡ್ಯಾಶ್ಬೋರ್ಡ್ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಬೆಡ್ ಹಂಚಿಕೆಯಲ್ಲಿನ ಅಕ್ರಮಗಳನ್ನು ತಡೆದು ,ಅದರಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಅಧಿಕಾರಿಗಳು, ತಜ್ಞರ ತಂಡ ಕೈಗೊಂಡ ಸುಧಾರಣಾ ಕ್ರಮಗಳ ಮುಂದುವರಿದ ಭಾಗ ಇದಾಗಿದೆ. ಇದರಲ್ಲಿ ಹಾಸಿಗೆ ಲಭ್ಯತೆ ಪ್ರಮಾಣ, ಪ್ರತಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ ಸಂಖ್ಯೆ, ರೋಗಿಗಳ ವಿವರ, 7 ದಿನಗಳ ಅವಧಿಗೆ ಬೆಡ್ ಹಂಚಿಕೆಯಲ್ಲಾಗುವ ಬದಲಾವಣೆ ಮೊದಲಾದ ಮಾಹಿತಿ ಪಡೆಯಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.