ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಆರಂಭ ಮಾಡಲಾಗುತ್ತಿರುವ ಟ್ರಯಾಜ್ (ಸರದಿ ನಿರ್ಧಾರ) ಕೇಂದ್ರಗಳಲ್ಲಿಯೂ ಆಮ್ಲಜನಕ ಸಾಂಧ್ರಕಗಳನ್ನು ಅಳವಡಿಸಿ ತುರ್ತು ಅಗತ್ಯವುಳ್ಳ ಸೋಂಕಿತರಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಟ್ರಯಾಜ್ ಕೇಂದ್ರಗಳಿಗೆ ಬರುವ ಕೊರೋನಾ ಸೋಂಕಿತರ ಆರೋಗ್ಯ ಸ್ಥಿತಿಗತಿಗಳನ್ನು ಅವಲೋಕನ ನಡೆಸಲಿರುವ ವೈದ್ಯರು, ತುರ್ತು ಅವಶ್ಯಕತೆ ಉಳ್ಳವರಿಗೆ ಕೇಂದ್ರದಲ್ಲಿಯೇ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಟ್ರಯಾಜ್ ಕೇಂದ್ರಗಳಲ್ಲಿ 24×7 ವೈದ್ಯರಿರಲಿದ್ದು, ಸೋಂಕಿತರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಇನ್ನು ಈ ಕೇಂದ್ರಗಳಲ್ಲಿ ಸೋಂಕಿತರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್ ಸಹ ಇರಿಸಲಾಗುತ್ತದೆ. ಹಾಗೆಯೇ ಈ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಸೋಂಕಿತರಿಗೆ ಹೋಂ ಐಸೋಲೇಷನ್ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದೋ ಎಂಬ ಕುರಿತು ನಿರ್ಧರಿಸುತ್ತಾರೆ. ಹಾಗೆಯೇ ಮನೆಯಲ್ಲಿ ಪ್ರತ್ಯೇಕ ವಾಸವಿರುವವರಿಗೆ ಔಷಧ ತಲುಪಿಸುವ ಕೆಲಸವನ್ನು ಸಹ ಈ ಕೇಂದ್ರಗಳು ಮಾಡಲಿವೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.